ಬೆಂಗಳೂರಿಗೆ ಆಗಮಿಸಿದ್ದ ವಿದೇಶಿ ಮಹಿಳೆಯಲ್ಲಿ ಎಬೋಲಾ ವೈರಾಣು ಶಂಕೆ

Ebola Virus
Ebola Virus
Published on

ಪ್ರಮುಖ ಮುಖ್ಯಾಂಶಗಳು

  • * ಮೇ 23ರಂದು ಉಗಾಂಡಾದಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆ
ಬೆಂಗಳೂರು: ಉಗಾಂಡದಿಂದ ಬೆಂಗಳೂರಿಗೆ ಆಗಮಿಸಿದ್ದ 28 ವರ್ಷದ ಮಹಿಳೆಯಲ್ಲಿ ಎಬೋಲಾದ ಸೋಂಕು ಶಂಕೆ ವ್ಯಕ್ತವಾಗಿದ್ದು, ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ (ಎಪಿಡೆಮಿಕ್ ಡಿಸೀಸ್ ಆಸ್ಪತ್ರೆ) ನಿಗಾ ವ್ಯವಸ್ಥೆಗೆ ಒಳಪಡಿಸಲಾಗಿದೆ.
ಮಾರ್ಗಸೂಚಿ ಅನುಸಾರ ಆಫ್ರಿಕನ್ ದೇಶಗಳಾದ ಉಗಾಂಡಾ, ಕಾಂಗೊ ಮೊದಲಾದ ದೇಶಗಳಿಂದ ಬಂದವರನ್ನು 21 ದಿನಗಳ ಕಾಲ ನಿಗಾದಲ್ಲಿ ಇರಿಸಲಾಗುತ್ತದೆ. ಮೇ 23ರಂದು ಉಗಾಂಡಾದಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆ, ಖಾಸಗಿ ಹೋಟೆಲ್‌ನಲ್ಲಿ ನೆಲೆಸಿದ್ದರು. ಸೋಂಕು ಶಂಕೆ ಹಿನ್ನೆಲೆಯಲ್ಲಿ ಮಹಿಳೆಯಿಂದ ಮಾದರಿ ಸಂಗ್ರಹಿಸಿ ಎನ್‌ಐವಿ ಬೆಂಗಳೂರು ಘಟಕದ ಮೂಲಕ ಪುಣೆಯ ರಾಷ್ಟ್ರೀಯ ವೈರಾಣು ಕೇಂದ್ರಕ್ಕೆ ಕಳುಹಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ತಪಾಸಣೆಯ ಸಮಯದಲ್ಲಿ ಮಹಿಳೆಯಲ್ಲಿ ಯಾವುದೇ ಲಕ್ಷಣಗಳನ್ನು ಕಂಡುಬರದಿದ್ದರೂ, ವಿಮಾನ ನಿಲ್ದಾಣದ ಜಿಲ್ಲಾ ಕಣ್ಗಾವಲು ತಂಡ ಮತ್ತು ಆರೋಗ್ಯ ತಂಡವು ಅವರ ಪ್ರಯಾಣದ ಇತಿಹಾಸದ ಕಾರಣ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿತ್ತು. 24 ಗಂಟೆಗಳ ನಂತರ ಅವರಿಗೆ ಸೌಮ್ಯವಾದ ದೇಹದ ನೋವು ಕಾಣಿಸಿಕೊಂಡಿತು. ಸದ್ಯ ಮಹಿಳೆ ಆರೋಗ್ಯ ಸ್ಥಿರವಾಗಿದ್ದು, ಬೇರೆ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಒಂದು ಅಥವಾ ಎರಡು ದಿನಗಳಲ್ಲಿ ಅವರ ವರದಿ ಬರಲಿದ್ದು, ವರದಿ ನೆಗೆಟಿವ್ ಆಗಿದ್ದರೂ, ಶಿಷ್ಟಾಚಾರದ ಪ್ರಕಾರ, 48 ಗಂಟೆಗಳ ಕಾಲ ಅವರನ್ನು ಗಮನಿಸಿದ ನಂತರ ಪುನರಾವರ್ತಿತ ಪರೀಕ್ಷೆಯನ್ನು ಮಾಡುತ್ತೇವೆ. ಅವರಿಗೆ ಎರಡು ಬಾರಿ ನೆಗೆಟಿವ್ ಬಂದ ನಂತರವೇ ಅವರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net