ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಎಲ್ಲ ಜನವಸತಿ, ಗ್ರಾಮ ಪಂಚಾಯಿತಿ, ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತದಲ್ಲಿ ದಾಖಲಾತಿ ಜಾಗೃತಿ ಅಭಿಯಾನ ನಡೆಸಬೇಕು. ಅಭಿಯಾನಕ್ಕೆ ಸರ್ಕಾರದಿಂದ ಅನುಷ್ಠಾನ ಮಾಡಲಾಗಿರುವ ಉಪ ಕ್ರಮಗಳು, ಗುಣಮಟ್ಟದ ಶಿಕ್ಷಣದ ಬಗ್ಗೆ ಮಕ್ಕಳ ಕಲಿಕಾ ಪ್ರಗತಿ, ಪಾಲಕರ ಸಹಕಾರದ ಬಗ್ಗೆ ಚರ್ಚಿಸುವುದು ಹಾಗೂ ಮಕ್ಕಳಿಂದ ಕಲಿಕಾಚಟುವಟಿಕೆಗಳ ಪ್ರದರ್ಶನ ಆಯೋಜಿಸುವಂತೆ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.