24.22 ಕೋಟಿ ವಿದೇಶಿ ಡ್ರಗ್ಸ್ ಜಪ್ತಿ

foreign-drugs
foreign-drugs
Published on

ಪ್ರಮುಖ ಮುಖ್ಯಾಂಶಗಳು

  • ವಿದೇಶಿ ಪ್ರಜೆ ಸೇರಿ 7 ಪೆಡ್ಲರ್ಸ್‌ ಬಂಧನ
  • ದೆಹಲಿಯಿಂದ ಕೋಟ್ಯಂತರ ರೂ.ಮೌಲ್ಯದ ಡ್ರಗ್ಸ್ ಸರಬರಾಜು
ಬೆಂಗಳೂರು: ದೆಹಲಿಯಿಂದ ರಾಜಧಾನಿ ಬೆಂಗಳೂರಿಗೆ ಪೂರೈಕೆಯಾಗುತ್ತಿದ್ದ ಮತ್ತೊಂದು ಡ್ರಗ್ಸ್ ಜಾಲವನ್ನು ಭೇದಿಸಿರುವ ಪೊಲೀಸರು ₹ 24.22 ಕೋಟಿ ಮೌಲ್ಯದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ಜಪ್ತಿ ಮಾಡಿ, 7 ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 11 ಕೆ.ಜಿ 237 ಗ್ರಾಂ ಎಂಡಿಎಂಎ, 2 ಕೆ.ಜಿ 352 ಗ್ರಾಂ ಹೈಡ್ರೊಗಾಂಜಾ, 10 ಕೆ.ಜಿ ಗಾಂಜಾ ಸೇರಿ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಗಿರಿನಗರ ಪೊಲೀಸರು ಆಫ್ರಿಕಾ ಮೂಲದ ಪೀಟರ್ ಆಲ್ಪೆರಡ್ (37) ಎಂಬಾತನನ್ನು ಬಂಧಿಸಿ, ಆತನಿಂದ 18.26 ಕೋಟಿ ರೂ.ಮೌಲ್ಯದ 9.127 ಕೆಜಿ ಎಂಡಿಎಂಎ, ಮೊಬೈಲ್ ೆನ್‌ನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಕಳೆದ ವರ್ಷ ಬಿಜಿನೆಸ್ ವೀಸಾದಡಿ ದೆಹಲಿಗೆ ಆಗಮಿಸಿದ್ದ. ನಾಲ್ಕು ತಿಂಗಳ ಹಿಂದೆ ಬೆಂಗಳೂರಿಗೆ ಕೆ.ಅಗ್ರಹಾರದ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಕೋಟ್ಯಂತರ ರೂ.ಮೌಲ್ಯದ ಡ್ರಗ್ಸ್ ಸ್ಥಳೀಯ ದಂಧೆಕೋರರಿಗೆ ಮಾರಾಟ ಮಾಡುತ್ತಿದ್ದನು.
ಆರೋಪಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ದೆಹಲಿಯಿಂದ ಡ್ರಗ್ಸ್ ಖರೀದಿಸುತ್ತಿರುವ ಬಗ್ಗೆ ಅನಾಮಧೇಯ ವ್ಯಕ್ತಿಯ ವಿಳಾಸ, ಮೊಬೈಲ್ ನಂಬರ್ ಪೊಲೀಸರಿಗೆ ನೀಡಿದ್ದಾನೆ. ಆದರೆ, ಆ ನಂಬರ್‌ಗಳು ಸ್ವಿಚ್‌ಆ್ ಆಗಿವೆ. ಅವುಗಳ ಬಗ್ಗೆ ತಾಂತ್ರಿಕ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
4.22 ಕೋಟಿ ಡ್ರಗ್ಸ್ ವಶಕ್ಕೆ:
ಇಂದಿರಾನಗರ ಠಾಣೆ ಪೊಲೀಸರು 4.22 ಕೋಟಿ ರೂ. ಮೌಲ್ಯದ 2 ಕೆ.ಜಿ 110 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಚಿಕ್ಕಜಾಲ ಠಾಣೆ ಪೊಲೀಸರು 1.64 ಕೋಟಿ ರೂ. ಮೌಲ್ಯದ 2 ಕೆಜಿ 352 ಗ್ರಾಂ ಹೈಡ್ರೋಗಾಂಜಾ ಹಾಗೂ ಗೋವಿಂದಪುರ ಠಾಣೆ ಪೊಲೀಸರು 10 ಲಕ್ಷ ರೂ. ಮೌಲ್ಯದ 10 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕಳೆದ ಒಂದುವಾರದಿಂದ ನಗರದ ವಿವಿಧ ಕಡೆ ಬೇಡ ಬ್ರೋ, ಆರೇಷನ್ ರೈಸ್ ಅಭಿಯಾನದಡಿ ವಿಶೇಷ ಕಾರ್ಯಾಚರಣೆ ನಡೆಸಿ ವಿದೇಶಿ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಪೆಡ್ಲರ್ಸ್‌ಗಳ ಹೇಳಿಕೆ ಆಧಾರದ ಮೇಲೆ ತನಿಖೆ ನಡೆಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಂಮತ್ ಕುಮಾರ್ ಸಿಂಗ್ ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net