ಯಲ್ಲಮ್ಮ ಹುಂಡಿಯಲ್ಲಿ ವಿದೇಶಿ ಕರೆನ್ಸಿ

ಚಿತ್ತಾಪುರದ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಮಾಡುತ್ತಿರುವ ಕಂದಾಯ ಇಲಾಖೆ ಸಿಬ್ಬಂದಿ.
ಚಿತ್ತಾಪುರದ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಮಾಡುತ್ತಿರುವ ಕಂದಾಯ ಇಲಾಖೆ ಸಿಬ್ಬಂದಿ.
Published on

ಪ್ರಮುಖ ಮುಖ್ಯಾಂಶಗಳು

  • ಚಿತ್ತಾಪುರದಲ್ಲಿ ನಾಗಾವಿ ದೇವಸ್ಥಾನದಲ್ಲಿ ಕಾಣಿಕೆ ಎಣಿಕೆ
  • 16.32 ಲಕ್ಷ ರೂ. ಸಂಗ್ರಹ
ಚಿತ್ತಾಪುರ: ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 16,32,025 ರೂ. ಸಂಗ್ರಹವಾಗಿದೆ. ಹುಂಡಿ ಎಣಿಕೆ ವೇಳೆ ವಿವಿಧ ದೇಶಗಳ ಕರೆನ್ಸಿ ಹಾಗೂ ವಿದೇಶಿ ಕಾಯಿನ್​ಗಳು ಪತ್ತೆಯಾಗಿದ್ದು, ಜನರಲ್ಲಿ ಕುತೂಹಲ ಮೂಡಿಸಿದೆ.
ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ್​ ನಾಗಯ್ಯ ಹಿರೇಮಠ ನೇತೃತ್ವದಲ್ಲಿ ಗುರುವಾರ ಹುಂಡಿ ಎಣಿಕೆ ನಡೆಯಿತು. 2026ರ ಫೆ.22ರಿಂದ ಆ.27ರ ಅವಧಿಯಲ್ಲಿ ಭಕ್ತರು ಹುಂಡಿಗೆ ಹಾಕಿದ್ದ ಕಾಣಿಕೆ ಹಣ ಎಣಿಕೆ ಮಾಡಲಾಯಿತು. ಈ ವೇಳೆ ಕೊರಿಯಾ, ಕೆನಡಾ, ಯುಎಇ ಹಾಗೂ ಅಮೆರಿಕ ದೇಶಗಳ ಕರೆನ್ಸಿಗಳು ಪತ್ತೆಯಾಗಿವೆ. ವಿದೇಶಿ ಹಣದ ಜತೆಗೆ ಅಮೆರಿಕದ ಕಾಯಿನ್​ಗಳೂ ದೊರೆತಿವೆ.
ಕೊರಿಯಾದ 10 ಸಾವಿರ ವನ್​, ಕೆನಡಾದ 5 ಸಿಂಗಾಪುರ ಡಾಲರ್​ಗೆ ಸಮನಾದ ವಿದೇಶಿ ಕರೆನ್ಸಿ, ಯುಎಇಯ 5 ಹಾಗೂ 10 ದಿರಹಂ ಮತ್ತು ಅಮೆರಿಕದ ವಿವಿಧ ಮುಖಬೆಲೆಯ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿವೆ. ಇವುಗಳ ಭಾರತೀಯ ಮೌಲ್ಯವನ್ನು ಲೆಕ್ಕ ಹಾಕಿದಾಗ ವಿದೇಶಿ ಕರೆನ್ಸಿಯ ಮೌಲ್ಯ 17,140.91 ರೂ. ಆಗಿದೆ. ಅಮೆರಿಕದ ಕಾಯಿನ್​ಗಳ ಮೌಲ್ಯ ಅಂದಾಜು 1 ಸಾವಿರ ರೂ.ನಷ್ಟಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ನಡೆದ ಹುಂಡಿ ಎಣಿಕೆ ಸಂದರ್ಭದಲ್ಲಿಯೂ ವಿದೇಶಿ ಕರೆನ್ಸಿ ಪತ್ತೆಯಾಗಿತ್ತು. ಈ ಬಾರಿಯೂ ನಾಲ್ಕೆದು ದೇಶಗಳ ಕರೆನ್ಸಿ ಹಾಗೂ ಕಾಯಿನ್​ಗಳು ದೊರೆತಿರುವುದು ಚರ್ಚೆಗೆ ಕಾರಣವಾಗಿದೆ. ವಿದೇಶಗಳಲ್ಲಿಯೂ ಯಲ್ಲಮ್ಮ ದೇವಿಯ ಭಕ್ತರಿದ್ದು, ಅಲ್ಲಿಂದಲೂ ದೇವಸ್ಥಾನಕ್ಕೆ ಕಾಣಿಕೆ ಸಲ್ಲಿಕೆಯಾಗುತ್ತಿರುವುದಕ್ಕೆ ಇದು ಸಾಯಾಗಿದೆ ಎಂದು ಭಕ್ತರು ಅಭಿಪ್ರಾಯಪಟ್ಟಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net