ಮುರಗೋಡದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಿವ ಚಿದಂಬರ ನಾಮಾವಳಿ ಪುಸ್ತಕ ಬಿಡುಗಡೆಗೊಳಿಸಲಾಯಿತು. ದತ್ತಪ್ಪಯ್ಯ ಸ್ವಾಮೀಜಿ, ಮಹಾಂತೇಶ ಕೌಜಲಗಿ, ಡಾ. ನಾಗೇಶ ಭಟ್ ಇತರರಿದ್ದರು.
Published on:
Copied
Follow Us
ವಿಜಯವಾಣಿ ಸುದ್ದಿಜಾಲ ಮುರಗೋಡ
ಜಗತ್ತಿನ 84 ಲಕ್ಷ ಜೀವರಾಶಿಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠವಾದುದು. ಸಮಾಜದ ಸುಖ, ಶಾಂತಿ ಹಾಗೂ ಮನುಕುಲದ ಒಳತಿಗಾಗಿ ಚಿದಂಬರರ ಸಂಕಲ್ಪದಂತೆ ಶತಚಂಡಿಕಾ ಮಹಾಯ ನೆರವೇರಿಸಲಾಗಿದೆ ಎಂದು ಪೀಠಾಧಿ-ಕಾರಿ ದಿವಾಕರ ದೀತ ಸ್ವಾಮೀಜಿ ಹೇಳಿದರು.
ಶ್ರೀೇತ್ರ ಕೆಂಗೇರಿ ಶಿವ ಚಿದಂಬರ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ದಿವಾಕರ ದೀತ ಇನಾಮದಾರ ಪೀಠಾರೋಹಣದ ದಶಮಾನೋತ್ಸವ ಹಾಗೂ ಶತಚಂಡಿಕಾ ಮಹಾಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೂಮಿ ಮೇಲೆ ವಾಸಿಸುವ ಸಕಲ ಜೀವರಾಶಿಗಳು ಶಾಂತಿ, ನೆಮ್ಮದಿಯಿಂದ ಬದುಕಲು ಶತಚಂಡಿಕಾ ಮಹಾಯ ಸಹಕಾರಿಯಾಗಿದೆ. ಮನುಷ್ಯ ಧಾನ, ಧರ್ಮ ಮಾಡುವ ಮೂಲಕ ನಿತ್ಯ ದೇವರ ಸ್ಮರಣೆ ಮಾಡಬೇಕು ಎಂದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಪುರಾತನ ಕಾಲದಿಂದಲೂ ಮಳೆ&ಬೆಳೆ ಕೃಪೆ ಹಾಗೂ ಆರೋಗ್ಯ ವೃದ್ಧಿಗಾಗಿ ಸಾಧು&ಸಂತರು ಮಹಾಯ ಕೈಗೊಂಡು ಸಾಮಾಜಿಕ ಉನ್ನತಿಗೆ ಶ್ರಮಿಸುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಸಮಾಜ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಚಿದಂಬರ ಮಠದ ಕಾರ್ಯ ಮಾದರಿಯಾಗಿದೆ ಎಂದರು.