ಸರ್ಕಾರಿ ಶಾಲೆಗಳ ಪ್ರಗತಿಗೆ ದಾನಿಗಳು ಕೈಜೋಡಿಸಲು

ಸೇಡಂ ತಾಲೂಕಿನ ರಂಜೋಳ ಸರ್ಕಾರಿ ಪ್ರೌಢಶಾಲೆಯಲ್ಲಿ ನೀರು ಶುದ್ಧೀಕರಣ ಟಕವನ್ನು ಕಾರ್ಮಿಕ ಸಂಘದ ಅಧ್ಯಕ್ಷ ಸತೀಶರೆಡ್ಡಿ ರಂಜೋಳ ಉದ್ಘಾಟಿಸಿದರು. ನಾರಾಯಣರೆಡ್ಡಿ ಶೇರಿಕಾರ, ಮೋಹನರೆಡ್ಡಿ ರಂಜೋಳ, ಕೃಷ್ಣಾರೆಡ್ಡಿ ಚಿಟಕನಪಲ್ಲಿ, ಬಸವರಾಜ ಜಾಕನಳ್ಳಿ ಇತರರಿದ್ದರು.
ಸೇಡಂ ತಾಲೂಕಿನ ರಂಜೋಳ ಸರ್ಕಾರಿ ಪ್ರೌಢಶಾಲೆಯಲ್ಲಿ ನೀರು ಶುದ್ಧೀಕರಣ ಟಕವನ್ನು ಕಾರ್ಮಿಕ ಸಂಘದ ಅಧ್ಯಕ್ಷ ಸತೀಶರೆಡ್ಡಿ ರಂಜೋಳ ಉದ್ಘಾಟಿಸಿದರು. ನಾರಾಯಣರೆಡ್ಡಿ ಶೇರಿಕಾರ, ಮೋಹನರೆಡ್ಡಿ ರಂಜೋಳ, ಕೃಷ್ಣಾರೆಡ್ಡಿ ಚಿಟಕನಪಲ್ಲಿ, ಬಸವರಾಜ ಜಾಕನಳ್ಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸತೀಶರೆಡ್ಡಿ ಮನವಿ
  • ರಂಜೋಳ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕ ಉದ್ಘಾಟನೆ
ಸೇಡಂ: ಕೆಟ್ಟಿದ್ದ ನೀರು ಶುದ್ಧೀಕರಣ ಘಟಕವನ್ನು ಸರಿಪಡಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂಧು ಅಲ್ಟ್ರಾಟೆಕ್​ ಸಿಮೆಂಟ್​ ಕಂಪನಿ ಕಾರ್ಮಿಕರ ಸಂಘದ ಅಧ್ಯಕ್ಷ ಸತೀಶರೆಡ್ಡಿ ರಂಜೋಳ ಹೇಳಿದರು.
ರಂಜೋಳದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನೀರು ಶುದ್ಧೀಕರಣ ಘಟಕ ಉದ್ಘಾಟಿಸಿ ಮಾತನಾಡಿ, ಶಾಲೆಯಲ್ಲಿ ನೂರಾರು ಮಕ್ಕಳು ವಿದ್ಯಾರ್ಜನೆ ಮಾಡುತ್ತಾರೆ. ಸರ್ಕಾರ ಈ ಹಿಂದೆ ನೀರು ಶುದ್ಧೀಕರಣ ಘಟಕ ನೀಡಿತ್ತು, ಆದರೆ ಕಾಲ ಕ್ರಮೇಣ ಕೆಟ್ಟು ಹೋಗಿತ್ತು. ರಿಪೇರಿಗೆ ದೊಡ್ಡ ಪ್ರಮಾಣದಲ್ಲಿ ಹಣ ಬೇಕಾಗಿರುವದರಿಂದ ಕೋಣೆಯಲ್ಲಿ ಕೊಳೆಯುತ್ತಿತ್ತು. ಇದನ್ನು ಗಮನಿಸಿದ ಗ್ರಾಮದ ಮೋಹನರೆಡ್ಡಿ ಮುನ್ನೂರ ಅವರು ವೈಯಕ್ತಿಕ ಹಣ ಖರ್ಚು ಮಾಡಿ ದುರಸ್ತಿಗೊಳಿಸಿ ಮಕ್ಕಳಿಗೆ ಅನುಕೂಲ ಮಾಡಿದ್ದಾರೆ. ಸಹಾಯ ಮಾಡಲು ಸಾಧ್ಯಾವಿರುವವರು ಸರ್ಕಾರಿ ಶಾಲೆಗಳ ಪ್ರಗತಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ನಾರಾಯಣರೆಡ್ಡಿ ಶೇರಿಕಾರ, ದಾನಿ ಮೋಹನರೆಡ್ಡಿ ಮುನ್ನೂರ, ಮುಖ್ಯಗುರು ಜಗದೇವಿ ಪಾಟೀಲ್​, ಪ್ರಮುಖರಾದ ಕೃಷ್ಣಾರೆಡ್ಡಿ ಚಿಟಕನಪಲ್ಲಿ, ಬಸವರಾಜ ಜಾಕನಹಳ್ಳಿ, ಸತೀಶರೆಡ್ಡಿ ಬಿಚ್ಚಾಲ, ಮಹೇಶ ಪೂಜಾರಿ, ಮಲ್ಲು ಮಡಿವಾಳ, ಜಗನ್ನಾಥ, ಸಾಯಿರೆಡ್ಡಿ, ಅನಂತಯ್ಯ ಯಾದವ, ಮಹಿಪಾಲರೆಡ್ಡಿ ಪಾಟೀಲ್​ ಜಾಕನಹಳ್ಳಿ ಸೇರಿದಂತೆ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net