_1780761778633.webp?w=480&auto=format%2Ccompress&fit=max)
_1780761778633.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ರಾಜ್ಯದ ಪರಿಶಿಷ್ಟಜಾತಿಯ ಚರ್ಮ ಕುಶಲಕರ್ಮಿಗಳಸಾಮಾಜಿಕ ಹಾಗೂ ಆರ್ಥಿಕ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆಒಳಪಡುವ ಡಾ. ಬಾಬುಜಗಜೀವನ ರಾಂ ಚರ್ಮ ಕೈಗಾರಿಕಾಅಭಿವೃದ್ಧಿ ನಿಗಮ ಲಿಡ್ಕರ್ ಸಂಸ್ಥೆವತಿಯಿಂದ ಇದೇ ಮೊದಲ ಬಾರಿಗೆಪಾದರಕ್ಷೆ ತಯಾರಿಕಾ ಸ್ಪರ್ಧೆಆಯೋಜಿಸಲಾಗಿತ್ತು.
ರಾಜ್ಯದನೈಜ ಚರ್ಮ ಕುಶಲಕರ್ಮಿಗಳ ತಾಂತ್ರಿಕನೈಪುಣ್ಯ, ಪಾರಂಪರಿಕಕೌಶಲ ಹಾಗೂ ಸೃಜನಶೀಲತೆಯನ್ನುಪ್ರೋತ್ಸಾಹಿಸುವ ಉದ್ದೇಶದಿಂದಲಿಡ್ಕರ್ ಸಂಸ್ಥೆ ರಾಜ್ಯಮಟ್ಟದಚರ್ಮ ಕುಶಲಕರ್ಮಿಗಳ ಪಾದರಕ್ಷೆತಯಾರಿಕಾ ಸ್ಪರ್ಧೆಯನ್ನು ಶನಿವಾರಕೆಂಗೇರಿ ಸಮೀಪದ ಉಲ್ಲಾಳಉಪನಗರದಲ್ಲಿರುವ ಕಿಲ್ಟ್ ಸಂಸ್ಥೆಯತಾಂತ್ರಿಕ ಸಹಕಾರದೊಂದಿಗೆಹಮ್ಮಿಕೊಳ್ಳಲಾಗಿತ್ತು.
ಚರ್ಮಕುಶಲಕರ್ಮಿಗಳು ತಲೆಮಾರುಗಳಿಂದಪಾರಂಪರಿಕ ಕೌಶಲವನ್ನು ಹೊಂದಿದ್ದು,ಆ ಕೌಶಲಕ್ಕೆಹೊಸ ವಿನ್ಯಾಸ,ನಾವೀನ್ಯ ಹಾಗೂಆಧುನಿಕ ಮಾರುಕಟ್ಟೆ ಅವಶ್ಯಕತೆಗಳಸ್ಪರ್ಶ ನೀಡುವುದು ಈ ಸ್ಪರ್ಧೆಯಮುಖ್ಯ ಉದ್ದೇಶವಾಗಿತ್ತು.ರಾಜ್ಯದ ವಿವಿಧಭಾಗಗಳಿಂದ ಆಗಮಿಸಿದ ಚರ್ಮಕುಶಲಕರ್ಮಿಗಳು ತಮ್ಮ ಪಾದರಕ್ಷೆತಯಾರಿಕಾ ಕೌಶಲ್ಯ,ವಿನ್ಯಾಸ ಸಾಮರ್ಥ್ಯಹಾಗೂ ಸೃಜನಾತ್ಮಕತೆಯನ್ನು ಈಸ್ಪರ್ಧೆಯ ಮೂಲಕ ಪ್ರದರ್ಶಿಸಿದರು.ಈ ಮೂಲಕ ಚರ್ಮಕುಶಲಕರ್ಮಿಗಳ ಪ್ರತಿಭೆಯನ್ನುಗುರುತಿಸಿ,ಗೌರವಿಸಲಾಯಿತು.
ಸ್ಪರ್ಧೆಯಲ್ಲಿವಿಜೇತರಾದ ಮೈಸೂರಿನ ರಾಜು ಅವರಿಗೆಪ್ರಥಮ ಬಹುಮಾನ 50ಸಾವಿರ, ವಿಜಯಪುರದಚಿದಾನಂದ ಜಾದವ್ ಅವರಿಗೆ ದ್ವಿತಿಯಬಹುಮಾನ 30 ಸಾವಿರಹಾಗೂ ಬೆಂಗಳೂರು ಚಿನ್ನಪ್ಪಗಾರ್ಡನ್‌ನ ಕಾಳಿದಾಸ್ ಅವರಿಗೆತೃತಿಯ ಬಹುಮಾನ 20ಸಾವಿರ ಮತ್ತುಚನ್ನರಾಯಪಟ್ಟಣದ ಗುರುರಾಜ್ ಹಾಗೂಮೈಸೂರಿನ ಎಸ್.ಸ್ವಾಮಿಈರ್ವರಿಗೂ ತಲಾ 10ಸಾವಿರ ರೂಪಾಯಿಸಮಾಧಾನಕರ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿಕನ್ನಡ ಅಭಿವೃದ್ಧಿ ಪ್ರಾಧಿಕಾರದಅಧ್ಯಕ್ಷ ಪುರುಷೋತ್ತಮ ಬಿಳಿಮಲೆ,ಲಿಡ್ಕರ್ ಎಂಡಿಡಾ.ಕೆ.ಎಂ.ವಸುಂಧರಾ,ನಿಗಮದ ಅಧ್ಯಕ್ಷಮುಂಡರಗಿ ನಾಗರಾಜ,ಕರ್ನಾಟಕ ಚರ್ಮಮತ್ತು ್ಯಾಷನ್ ತಾಂತ್ರಿಕ ಸಂಸ್ಥೆನಿರ್ದೇಶಕ ಸಿದ್ಧಲಿಂಗಪ್ಪ ಪೂಜಾರ್ಮತ್ತಿತರರು ಪಾಲ್ಗೊಂಡಿದ್ದರು.