ವಿದ್ಯಾರ್ಥಿಗಳ ಜೀವಕ್ಕಿಲ್ಲವೇ ಬೆಲೆ? : ಸಂಜೆ ವೇಳೆ ಶಾಲಾ&ಕಾಲೇಜುಗಳು ಬಿಡುವ ಸಮಯದಲ್ಲಂತೂ ಇಲ್ಲಿನ ಪರಿಸ್ಥಿತಿ ಮೈ ನಡುಗಿಸುವಂತಿರುತ್ತದೆ. ಪ್ರಗತಿ ಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ, ಹೆಣ್ಣುಮಕ್ಕಳ ಶಾಲೆ, ರೋಟರಿ ಶಾಲೆ, ಮಾಯಾ ಆಂಗ್ಲ ಮಾಧ್ಯಮ ಶಾಲೆಗಳ ಕನಿಷ್ಠ 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಏಕಕಾಲದಲ್ಲಿ ರಸ್ತೆಗೆ ಇಳಿಯುತ್ತಾರೆ. ಪಟ್ಟಣದ ಬಸ್ ನಿಲ್ದಾಣ ಹಾಗೂ ಅಂಗತಟ್ಟಿ ನಂಜುಂಡಪ್ಪ ವೃತ್ತಗಳೇ ಇವರ ಸಂಚಾರದ ಮುಖ್ಯ ಸ್ಥಳಗಳಾಗಿವೆ. ಆದರೆ, ದುರಂತವೆಂದರೆ ಈ ಅತ್ಯಂತ ಸೂಕ್ಷ$್ಮ ಹಾಗೂ ಗಿಜಿಗುಡುವ ರಸ್ತೆಗಳಲ್ಲಿ ಉಂಟಾಗುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸ್ ಸಿಬ್ಬಂದಿಯೂ ಇರುವುದಿಲ್ಲ. ಮಕ್ಕಳು ವಾಹನಗಳ ನಡುವೆ ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟಬೇಕಾದ ಅನಿವಾರ್ಯತೆ ಇದೆ.