ಈ ಭಾಗದ ಗ್ರಾಮಗಳ ಸಾರ್ವಜನಿಕರು ಜಮೀನು, ಹೊಲ ಗದ್ದೆಗಳಿಗೆ ಓಡಾಡಲು ಅನುಕೂಲವಾಗುವಂತೆ ನಿಟ್ಟೂರುಮುಗುಳವಳ್ಳಿ ಸಮೀಪ ಹಳ್ಳಕ್ಕೆ ಅಡ್ಡಲಾಗಿ ಕಾಲುಸಂಕ ಸೇತುವೆ ನಿರ್ಮಿಸಲಾಗುತ್ತಿದೆ. ಇದು ಕೇವಲ ರಸ್ತೆ ಕಾಮಗಾರಿ ಮಾತ್ರವಲ್ಲದೆ, ರಸ್ತೆ, ಸೇತುವೆ ಹಾಗೂ ಚೆಕ್‌ಡ್ಯಾಂ ಮೂರನ್ನೂ ಒಳಗೊಂಡ ಬಹುಪಯೋಗಿ ಯೋಜನೆಯಾಗಿದೆ. ಮಳೆ ನೀರನ್ನು ತಡೆಗಟ್ಟುವ ಜತೆಗೆ ರೈತರ ಜಮೀನುಗಳಿಗೆ ಸುಲಭವಾಗಿ ಸಂಪರ್ಕ ಒದಗಿಸುವ ಉದ್ದೇಶದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಈ ಯೋಜನೆ ಕೃಷಿಗೆ ಮತ್ತು ಮುಂದಿನ ಪೀಳಿಗೆಗೂ ಉಪಯೋಗವಾಗಲಿದೆ, ಸ್ಥಳಕ್ಕೆ ಬಂದು ಪರಿಶೀಲಿಸಲಾಗಿ ಇಲಾಖೆಯಿಂದ ಗುಣಮಟ್ಟದ ಕಾಮಗಾರಿ ನಡೆಯುತ್ತಿದ್ದು, ಸೇತುವೆ ನಿರ್ಮಾಣದಲ್ಲಿ ಉತ್ತಮ ಪ್ರಮಾಣದ ಸ್ಟೀಲ್ ಬಳಸಲಾಗಿದೆ ಎಂದು ಶಾಸಕ ಸುರೇಶ್ ಮಾಹಿತಿ ನೀಡಿದರು.