ಬಿಸಿ ಮಾಡಿದರೆ ಸಾಕು ತಿನ್ನಲು ಸಿದ್ಧವಾಗುವ ಈ ಸ್ಯಾಚೆಟ್ಟುಗಳು ನಿಗದಿತ ಸಮಯದಲ್ಲಿ ಬಳಸಿದರೆ ಉತ್ತಮ, ಇಲ್ಲವಾದರೆ ಅವೂ ತ್ಯಾಜ್ಯ ರೂಪದಲ್ಲಿ ತೊಟ್ಟಿಯನ್ನು ಸೇರುತ್ತವೆ. ಆಹಾರದ ತ್ಯಾಜ್ಯದಲ್ಲಿ ಆಹಾರದ ಜೊತೆಗೆ ಅದರ ಉತ್ಪಾದನೆಗೆ ಬಳಸಿದ ಸಂಪನ್ಮೂಲಗಳಾದ ನೀರು, ವಿದ್ಯುತ್, ಕೃಷಿಗೆ ಬೇಕಾದ ಸಂಪನ್ಮೂಲಗಳು, ಆಹಾರ ಬೆಳೆದ ರೈತನ ಪರಿಶ್ರಮ, ಎಲ್ಲವೂ ದಂಡವಾಗುವುದು. ಇನ್ನು ಇನ್ನೊಬ್ಬರ ಹೊಟ್ಟೆ ತುಂಬಬಹುದಾದ ಆಹಾರ, ತೊಟ್ಟಿಯ ಪಾಲಾದರೆ ಹಳಸಿದ ಆಹಾರದಿಂದ ಹೊರಬರುವ ಮಿಥೇನ್ ಅನಿಲ ಪರಿಸರಕ್ಕೆ ಹಾನಿಕಾರಕ.