ಚೇರ್ಮನ್ಸ್ ಕ್ಲಬ್ ಮೇಲೆ ಆಹಾರ ಸುರಕ್ಷತೆ ಅಧಿಕಾರಿಗಳಿಂದ ದಾಳಿ

Food safety officials lock down Chairman's Clubs kitchen in Dollars Colony
Food safety officials lock down Chairman's Clubs kitchen in Dollars Colony
Published on

ಪ್ರಮುಖ ಮುಖ್ಯಾಂಶಗಳು

  • * ನೈರ್ಮಲ್ಯದ ಕೊರತೆ, ಅವಧಿ ಮೀರಿದ ಆಹಾರ ಪತ್ತೆ
ಬೆಂಗಳೂರು: ನಗರದ ಡಾಲರ್ಸ್ ಕಾಲನಿಯಲ್ಲಿರುವ ಚೇರ್ಮನ್ಸ್ ಕ್ಲಬ್ ಮೇಲೆ ಆಹಾರ ಸುರಕ್ಷತೆ ಇಲಾಖೆ ದಿಢೀರ್ ದಾಳಿ ನಡೆಸಿದ್ದು, ಈ ವೇಳೆ ನೈರ್ಮಲ್ಯ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಬೀಗ ಹಾಕಿಸಲಾಗಿದೆ.
ಆರೋಗ್ಯ ಸಚಿವ ಯು.ಟಿ.ಖಾದರ್ ನಿರ್ದೇಶನದ ಮೇರೆಗೆ ಗುರುವಾರ ರಾತ್ರಿ ಆಹಾರ ಸುರಕ್ಷತೆ ಅಧಿಕಾರಿಗಳು, ಕ್ಲಬ್‌ಗೆ ಭೇಟಿ ನೀಡಿ ಅಡುಗೆ ಕೊಠಡಿ ತಪಾಸಣೆ ನಡೆಸಿದರು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ನಿಯಮಗಳು ಉಲ್ಲಂಘನೆಯಾಗಿರುವುದನ್ನು ಗಮನಿಸಿದ ಅಧಿಕಾರಿಗಳು, ಕಾನೂನು ಕ್ರಮಕ್ಕೆ ಸೂಚಿಸಿದ್ದಾರೆ. ಪರಿಶೀಲನೆ ವೇಳೆ ಅವಧಿ ಮೀರಿದ 40 ಕೆ.ಜಿ. ಮೆಣಸಿನಕಾಯಿಯ ಆಹಾರ ಪದಾರ್ಥ ಸಂಗ್ರಹಿಸಿಟ್ಟಿರುವುದನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ನಿಯಮಾವಳಿ ಅನುಸಾರ, 5 ಕೆ.ಜಿ. ಬ್ರೆಡ್ ಕ್ರಂಬ್ಸ್ ಹಾಗೂ 2 ಕೆ.ಜಿ. ಸಜೀರಾ ಆಹಾರ ಪದಾರ್ಥಗಳಿಗೆ ಲೇಬಲ್ ಇಲ್ಲದಿರುವುದು, ಆಹಾರ ಪದಾರ್ಥಗಳಲ್ಲಿ ಅನುಮತಿಸದ, ನಿಯಮಬಾಹಿರ ಕೃತಕ ಬಣ್ಣಗಳ ಬಳಕೆ ಪತ್ತೆಯಾಗಿದೆ. ಈ ವೇಳೆ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net