ಅಳವಂಡಿ: ನಶಿಸಿಹೋಗುತ್ತಿರುವ ಸಾಂಪ್ರದಾಯಿಕ ಕಲೆಗಳನ್ನು ಎಲ್ಲರೂ ಉಳಿಸಿ ಬೆಳೆಸಲು ಕೈಜೋಡಿಸಬೇಕೆಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶಪ್ಪ ಶಿಳ್ಳಿಕ್ಯಾತರ ತಿಳಿಸಿದರು.
ಬೆಟಗೇರಿಯ ಶ್ರೀ ಮೂಕ ಬಸವೇಶ್ವರ ದೇವಸ್ಥಾನದಲ್ಲಿ ಮಳೆ-ಬೆಳೆಗಾಗಿ ಪ್ರಾರ್ಥಿಸಿ ಹಮ್ಮಿಕೊಂಡಿದ್ದ ವಿರಾಟ ಪರ್ವ ಅರ್ಥಾತ್ ಕೀಚಕನ ವಧೆ ತೊಗಲು ಗೊಂಬೆಯಾಟ ಪ್ರದರ್ಶನಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.
ಪ್ರಕೃತಿಯ ಕೃಪೆ, ಜನ ಕಲ್ಯಾಣಕ್ಕಾಗಿ ಪ್ರದರ್ಶನ ನೀಡುತ್ತಿರುವುದು ಹೆಮ್ಮೆಯ ಸಂಗತಿ. ರಂಗಭೂಮಿ, ಬಯಲಾಟ, ತೊಗಲು ಗೊಂಬೆಯಾಟಗಳಿಗೆ ಪ್ರೋತ್ಸಾಹಿಸಬೇಕಿದೆ ಎಂದರು.
ಖ್ಯಾತ ಕಲಾವಿದ ಕೇಶಪ್ಪ ಶಿಳ್ಳಿಕ್ಯಾತರ ನೇತೃತ್ವದಲ್ಲಿ ತೊಗಲು ಗೊಂಬೆಯಾಟ ಪ್ರದರ್ಶನದಲ್ಲಿ ಪಾಂಡು, ವಿನೋದ ಇತರ ಕಲಾವಿದರಿದ್ದರು.