ವಿನೂತನ ಅಧ್ಯಯನದತ್ತ ಗಮನಹರಿಸಿ / SULIBELE

ಹೊಸಕೋಟೆ ತಾಲೂಕು ದೇವಲಾಪುರ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಸಾಂಸತಿಕ ಸಮಾರೋಪದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲೆ ತ್ರಿವೇಣಿ, ಕಾಲೇಜು ಉಪಾಧ್ಯಕ್ಷ ಮಂಜುನಾಥ್​, ಡಾ.ಉಮೇಶ್​ ಬೇವಿನಹಳ್ಳಿ, ಉಪನ್ಯಾಸಕರಾದ ಬೀರೆಗೌಡ, ಬಿ.ಎಸ್​.ಅಂಗಡಿ, ನಂದಿನಿ ಇತರರು ಇದ್ದರು.
ಹೊಸಕೋಟೆ ತಾಲೂಕು ದೇವಲಾಪುರ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಸಾಂಸತಿಕ ಸಮಾರೋಪದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲೆ ತ್ರಿವೇಣಿ, ಕಾಲೇಜು ಉಪಾಧ್ಯಕ್ಷ ಮಂಜುನಾಥ್​, ಡಾ.ಉಮೇಶ್​ ಬೇವಿನಹಳ್ಳಿ, ಉಪನ್ಯಾಸಕರಾದ ಬೀರೆಗೌಡ, ಬಿ.ಎಸ್​.ಅಂಗಡಿ, ನಂದಿನಿ ಇತರರು ಇದ್ದರು.
Published on
ಸೂಲಿಬೆಲೆ : ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ಹೊಸ ಅವಿಷ್ಕಾರಗಳಾಗಬೇಕು. ಹೊಸ ಅಧ್ಯಯನದತ್ತ ವಿದ್ಯಾರ್ಥಿಗಳು ಗಮನಹರಿಸಬೇಕು. ಪ್ರತಿಭೆಗಳ ಅನಾವರಣವಾಗಬೇಕು ಎಂದು ಮೈಸೂರು ಜಿಲ್ಲೆಯ ದೇವನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಉಮೇಶ್​ ಬೇವಿನಹಳ್ಳಿ ಹೇಳಿದರು.
ಹೊಸಕೋಟೆ ತಾಲೂಕಿನ ದೇವಲಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಯೋಜಿಸಿದ್ದ ವಾರ್ಷಿಕ ಸಾಂಸತಿಕ ಮತ್ತು ಕ್ರೀಡಾ ಸಮಾರೋಪದಲ್ಲಿ ಮಾತನಾಡಿದ ಅವರು, ವಿದ್ಯೆ ಎಂಬ ಆಸ್ತಿ ಸಂಪಾದನೆಗೆ ಇದು ಪರ್ವ ಕಾಲ. ಇದನ್ನು ಯಾರು ಕದಿಯಲಾಗದು. ಒಮ್ಮೆ ಮಾಡಿಕೊಂಡ ಆಸ್ತಿ ಜೀವನ ಪರ್ಯಂತ ಜತೆಯಲ್ಲಿರುತ್ತದೆ ಎಂದರು. 
ಕುವೆಂಪು ಪ್ರೌಢಶಾಲೆ ಶಿಕ್ಷಕ ಕುಮಾರೇಶ್​ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಸಾಧನೆಗೆ ಅನೇಕ ಅವಕಾಶಗಳಿರುತ್ತವೆ. ಜ್ಞಾನಾರ್ಜನೆಗೆ ಸೂಕ್ತ ಕಾಲ ಪಿಯುಸಿ. 2 ವರ್ಷಗಳ ಕಾಲ ಸಾಧನೆಯ ಅಡಿಗಲ್ಲು ಹಾಕಿಕೊಳ್ಳಿ, ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು. 
2024-&25ನೇ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಕಲಾ ವಿಭಾಗದ ಸಿಂಧೂ, ವಾಣಿಜ್ಯ ವಿಭಾಗದ ಚಂದನಾ, ಲಕ್ಷಿ$್ಮ, ವಿಜ್ಞಾನ ವಿಭಾಗದ ಜ್ಞಾನೇಂದ್ರ ಅವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. 
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಂಜುನಾಥ್​, ಎಚ್​.ಇ.ಮಂಜುನಾಥ್​, ಡಿ.ಎನ್​.ಮಂಜುನಾಥ್​, ದೇವಲಾಪುರ ಪ್ರೌಢಶಾಲೆ ಮುಖ್ಯಶಿಕ್ಷಕಿ ಸಂಧ್ಯಾ, ಉಪನ್ಯಾಸಕರಾದ ಬೀರೆಗೌಡ, ಬಿ.ಎಸ್​.ಅಂಗಡಿ, ನಂದಿನಿ, ಉಷಾರಾಣಿ, ರೂಪಾ, ಮಮತಾ, ಪದ್ಮಾ, ರಾಣಿ, ಶ್ವೇತಾ, ಮುಕ್ಸೂದ್​, ಗೋಪಾಲಕೃಷ್ಣ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net