ಹೊಸಬರು ತಮ್ಮ ಮೊದಲ ವೇದಿಕೆ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದರೆ, ಅನುಭವಿಗಳಾದ ಚಾಲಕರು ಚಾಂಪಿಯನ್ ಪಟ್ಟಕ್ಕಾಗಿ ಕಾದು ನೋಡುತ್ತಿದ್ದಾರೆ. ಎಲ್‌ಜಿಬಿ ಫಾರ್ಮುಲಾ 4, ಜೆಕೆ ಟೈರ್ ನವೀಸ್ ಕಪ್, ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ ಹಾಗೂ ಹೊಸದಾಗಿ ಪರಿಚಯಿಸಲಾದ ಜೆಕೆ ಟೈರ್ ಲೆವಿಟಾಸ್ ಕಪ್ಗಳಲ್ಲಿ ರೋಮಾಂಚನಕಾರಿ ಸ್ಪರ್ಧೆಗಳು ನಡೆಯಲಿವೆ. ಇಂಡಿಯನ್ ರೇಸಿಂಗ್ ಫೆಸ್ಟಿವಲ್ 2025 ರ ಭಾಗವಾಗಿರುವ ಎಫ್‌ಐಎ ಪ್ರಮಾಣೀಕೃತ ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್‌ನ ಅಂತಿಮ ಸುತ್ತಿಗೆ ಸಾಕ್ಷಿಯಾಗಲಿದೆ.