

ದೇವನಹಳ್ಳಿ :
ಸಂಪತ್ತಿನ ಒಡತಿ ವರಮಹಾಲ್ಮ ಹಬ್ಬದ ಅದ್ದೂರಿ ಆಚರಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹೂವು, ಹಣ್ಣು ಸಿಹಿ ತಿನಿಸು, ಅಲಂಕಾರಿಕ ವಸ್ತುಗಳ ಖರೀದಿ ಜೋರಾಗಿತ್ತು.
ಕೆಜಿ ಸೇಬು 150&300, ಮರಸೇಬು 150& 200, ದಾಳಿಂಬೆ 200, ಕಿತ್ತಲೆ 150&300, ಕಿತ್ತಳೆ 100, ಏಲಕ್ಕಿ ಬಾಳೆ 120&140, ಪಚ್ಚಬಾಳೆ 50, ದ್ರಾ 200&300, ಅನಾನಸ್ ಒಂದು ಜೊತೆ 150, ಚೇಪೆ 100 ರೂ.ವರೆಗೆ ಮಾರಾಟವಾಯಿತು. ಇನ್ನು ಕೆಜಿ ಮಲ್ಲಿಗೆ 2,500, ಕನಕಾಂಬರ 4 ಸಾವಿರ, ಕಾಕಡ 1000, ರೋಜಾ 300&350, ಚಂಡು ಹೂವು 120, ಶಾಮಂತಿಗೆ 300, ಸುಗಂಧರಾಜ 400, ಕಾಡು ಮಲ್ಲಿಗೆ 600&800 ರೂ.ವರಗೆ ಬೆಲೆ ಇತ್ತು. ಲ್ಮಗೆ ಪ್ರಿಯವಾದ ಕಮಲ ಜೊಡಿಗೆ 80ರಿಂದ 100 ರೂ. ಆಸ್ಟ್ರೆಲಿಯಾ ಹೂವು 1 ಕಟ್ಟಿಗೆ 150 ರೂ., ರೋಜಾ 150 ರೂ., ಹಾರ ತೋಮಾಲೆ 800ರಿಂದ 1000, ಹೂವಿನ ಫ್ರೇಂ 2 ಸಾವಿರ ರೂ.ವರೆಗೂ ಮಾರಾಟವಾಯಿತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಬೆಲೆ ಏರಿಕೆ ಕಂಡುಬಂತು.
ಹಬ್ಬದ ಖರೀದಿಗೆ ಬಂದಿದ್ದ ಗ್ರಾಹಕರು ವಾಹನಗಳನ್ನು ರಸ್ತೆಗಳಲ್ಲಿ ಅಡ್ಡಾದಿಡ್ಡಿ ನಿಲ್ಲಿಸಿದ್ದರಿಂದ ಪಟ್ಟಣದ ಬಜಾರ್ ರಸ್ತೆ, ಬೆಂಗಳೂರು&ಚಿಕ್ಕಬಳ್ಳಾಪುರ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಂಚಾರ ಸಿಕ್ಕು ಉಂಟಾಗಿತ್ತು. ಸಂಚಾರ ಪೋಲಿಸರು ಸಂಚಾರ ಸುಗಮ ವ್ಯವಸ್ಥೆಗಾಗಿ ಹರಸಾಹಸ ಪಡುತ್ತಿದ್ದರು.