ಮಠದಲ್ಲಿ ಮುತ್ತೆÊದೆಯರು ನಾಗದೇವತೆಗೆ ಬೆಲ್ಲದ ಹಾಲು ಎರೆದ ಬಳಿಕ ಸಿöÃ, ಪುರುಷರೆನ್ನದೆ ಎಲ್ಲರೂ ನಾಗದೇವರ ದಾರ ಕಟ್ಟಿಸಿಕೊಳ್ಳುವರು. ಇಷ್ಟಾರ್ಥ ಸಿದ್ಧಿಗಾಗಿ ಬೆಳಗ್ಗೆ ದೀರ್ಘದಂಡ ನಮಸ್ಕಾರ, ದೇವರಿಗೆ ಕೊಡೆಗಳನ್ನು ನೀಡಿ ಭಕ್ತಿ ಸಮರ್ಪಣೆ ಸಲ್ಲಿಸುವರು. ಮೈಸೂರ ದಸರಾ ಖ್ಯಾತಿಯ ಬೀರಲಿಂಗೇಶ್ವರ ಡೊಳ್ಳಿನ ಸಂಘದವರು ಡೊಳ್ಳಿನ ಪದಗಳ ಮೂಲಕ ರಂಜಿಸುವರು.