ಶಿರಾ ನಗರದ ಸಮಸ್ಯೆ ಸರಿಪಡಿಸಿ

Fix the problem of Shira city
Fix the problem of Shira city
Published on
ಶಿರಾ: ಯಾವ ವಾರ್ಡಿನಲ್ಲೂ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಸೂಕ್ತ ಕ್ರಮ ಜರುಗಿಸಿ ಎಂದು ಸದಸ್ಯರು ನಗರಸಭೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯಸಭೆಯಲ್ಲಿ ಒತ್ತಾಯಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಟಿ.ಬಿ.ಜಯಚಂದ್ರ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲದಿರುವುದು ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಾ ಎಂದು ಆಯುಕ್ತ ರುದ್ರೇಶ್​ ಅವರನ್ನು ಪ್ರಶ್ನಿಸಿದರು.
ಪ್ರತಿನಿತ್ಯ ಕಸ ವಿಲೇವಾರಿ ಕಾರ್ಯ ನಡೆಯುತ್ತಿದ್ದು, ಸಾರ್ವಜನಿಕರು, ಹೋಟೆಲ್​ ಮತ್ತು ಬೀದಿಬದಿ ವ್ಯಾಪಾರಿಗಳು ಎಲ್ಲೆಂದರಲ್ಲಿ ಕಸ ಚೆಲ್ಲುವುದರಿಂದ ಈ ಸಮಸ್ಯೆ ಉಂಟಾಗಿದೆ. ಸಿಸಿಟಿವಿ ಕ್ಯಾಮರಾ ಅಳವಡಿಸಿ ಕಸ ಹಾಕುವವರ ಮೇಲೆ ದಂಡ ವಿಧಿಸುವ ಕ್ರಮ ಜರುಗಿಸುತ್ತೇವೆ ಎಂದು ಆಯುಕ್ತ ಉತ್ತರಿಸಿದರು.
ನಗರದೆಲ್ಲಡೆ ಎಲ್ಲಂದರಲ್ಲಿ ್ಲೆಕ್ಸ್​ ಹಾಕಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ್ಲೆಕ್ಸ್​ ಹಾಕಲು ಒಂದು ನಿಯಮ ರೂಪಿಸಿ ಎಂದು ಸದಸ್ಯರು ಒತ್ತಾಯಿಸಿದಾಗ ಇನ್ನು ಮುಂದೆ ನಗರದಲ್ಲಿ ್ಲೆಕ್ಸ್​ ಅಳವಡಿಸಲು ಸೂಕ್ತ ಜಾಗ ನಿಗದಿಪಡಿಸಲಾಗುವುದು ಹಾಗೂ ಅದಕ್ಕೆ ನಗರಸಭೆಯಿಂದ ಹಣ ವಸೂಲಿ ಮಾಡುತ್ತೆ. ನಗರಸಭೆ ನಿಗದಿ ಪಡಿಸಿದ ಜಾಗಗಳ ಬಿಟ್ಟು ಬೇರೆ ಕಡೆ ಫ್ಲಕ್ಸ್​ ಹಾಕಿದರೆ ಅವರಿಗೆ ದಂಡ ವಿಧಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಅಮೃತ&2ಯೋಜನೆಯಿಂದ ನಗರದಿಲ್ಲಡೆ ರಸ್ತೆಗಳೆಲ್ಲ ಹಾಳಾಗಿದ್ದು, ಪ್ರತಿನಿತ್ಯ ಧೂಳಿನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹದಗೆಟ್ಟ ರಸ್ತೆಗಳನ್ನು ಸರಿಪಡಿಸಿದ ನಂತರವೇ ನಗರಸಭೆಯಿಂದ ಈ ಯೋಜನೆಗೆ ಅನುಮತಿ ನೀಡಿ ಎಂದು ನಗರಸಭೆ ಮಾಜಿ ಅಧ್ಯಕ್ಷ ಅಂಜಿನಪ್ಪ ಆಗ್ರಹಿಸಿದರು. ಇವರ ಹೇಳಿಕೆಗೆ ನಗರಸಭೆ ಸದಸ್ಯ ಉಮಾ ವಿಜಯರಾಜ್​, ಎಸ್​.ಎಲ್​.ರಂಗನಾಥ್​, ಸ್ವಾತಿಮುಂಜೇಶ್​ ಧ್ವನಿ ಗೂಡಿಸಿದರು.
ಮೇ 31ರ ಒಳಗೆ ಎಲ್ಲ ಕಾಮಗಾರಿಗಳು ಮುಕ್ತಾಯಗೊಳ್ಳಲಿದ್ದು, ನಂತರ ವಾಟರ್​ ಪ್ರಶರ್​ ಚೆಕ್​ ಮಾಡಿ ರಸ್ತೆ ದುರಸ್ತಿ ಮಾಡಲಾಗುವುದು ಎಂದು ಇಂಜಿನಿಯರ್​ ತಿಳಿಸಿದರು. ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ತಾಲೂಕಿನಲ್ಲಿ ಪ್ರಥಮ ಬಾರಿಗೆ ಅಮೃತ ಯೋಜನೆ ಅತಿ ಶೀಘ್ರದಲ್ಲಿ ಮುಕ್ತಾಯ ಗೊಳ್ಳಲಿದೆ ಎಂದು ಹೇಳಿದರು.
15ನೇ ವಾರ್ಡಿನಲ್ಲಿ ಹಂದಿಗಳ ಕಾಟ ಜಾಸ್ತಿಯಾಗಿದ್ದು, ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸದಸ್ಯೆ ತೇಜು ಬಾನು ಪ್ರಕಾಶ್​ ಪ್ರಶ್ನಿಸಿದಾಗ ನಗರಸಭೆ ಆಯುಕ್ತರು ಆರೋಗ್ಯ ನಿರೀಕ್ಷಕರನ್ನು ಕರೆದು ಕೂಡಲೇ ಹಂದಿ ಸಾಕಣಿಕೆಗಾರರಿಗೆ ಮೇ 15 ರೊಳಗೆ ನೋಟಿಸ್​ ನೀಡಿ ನಗರದ ಯಾವ ಭಾಗದಲ್ಲೂ ಹಂದಿಗಳು ಓಡಾಡಬಾರದು, ಓಡಾಡಿದರೆ ಹಂದಿ ಮಾಲೀಕರಿಗೆ ದಂಡ ಹಾಕಿ ಎಂದು ತಿಳಿಸಿದರು.
ಅಧ್ಯಕ್ಷ ಜೀಶಾನ್​ ಮೊಹಮ್ಮದ್​ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿಯ ನೂತನ ಸದಸ್ಯರನ್ನಾಗಿ ಎಸ್​.ಎಲ್​.ರಂಗನಾಥ್​, ಉಮಾ ವಿಜಯರಾಜ್​, ತ್ರಿವೇಣಿ ಭೂಕಾಂತ್​, ಕೃಷ್ಣಪ್ಪ ಹಾಗೂ ರಫಿ ಉಲ್ಲಾ ಅವರನ್ನು ಸರ್ವಾನುಮತದಿಂದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ನೂತನವಾಗಿ ಆಯ್ಕೆಗೊಂಡ ಸಮಿತಿಯ ಸದಸ್ಯರು ಎಂ.ಕೃಷ್ಣಪ್ಪ ಅವರನ್ನು ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net