ಹುಲಸೂರು ಸಮೀಪದ ಮಹಾರಾಷ್ಟ್ರ ಗಡಿ ಭಾಗದ ಭಾಲ್ಕಿ ತಾಲೂಕಿನ ಅಳವಾಯಿ ಗ್ರಾಮದ ಜಮೀನಿನಲ್ಲಿ ವಿದ್ಯುತ್ ತಂತಿ ಜೊತ್ತು ಬಿದ್ದಿರುವುದು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಳವಾಯಿ ರೈತರ ಒತ್ತಾಯ
ಹುಲಸೂರು: ಮಹಾರಾಷ್ಟ್ರ ಗಡಿ ಭಾಗದ ಭಾಲ್ಕಿ ತಾಲೂಕಿನ ಅಳವಾಯಿ ಗ್ರಾಮದ ರೈತರ ಹೊಲದಲ್ಲಿ ಜೋತು ಬಿದ್ದಿರುವ ವಿದ್ಯುತ್ ತಂತಿ ಸರಿಪಡಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಜೆಸ್ಕಾಂ ಇಲಾಖೆ ಅಧಿಕಾರಿಗಳ ರ್ನಿಲಕ್ಷದಿಂದ ವಿದ್ಯುತ್ ತಂತಿ ಜೋತು ಬಿದ್ದು ಸುಮಾರು ದಿನ ಕಳೆದರೂ ಸರಿಪಡಿಸುತ್ತಿಲ್ಲ ಎಂದು ರೈತರು ಗೋಳು ತೋಡಿಕೊಂಡಿದ್ದಾರೆ.
ಎರಡು ದಿನದ ಹಿಂದೆ ಬಿರುಗಾಳಿ ಹಾಗೂ ಮಳೆಯಿಂದಾಗಿ ವಿದ್ಯುತ್ ತಂತಿ ಕೆಳಗೆ ತಾಗಿ ಕೃಷಿ ಚಟುವಟಿಕೆಗಳಿಗೆ ಅಡಚಣೆ ಉಂಟಾಗಿದ್ದು, ಹೊಲದಲ್ಲಿ ನೀರು ಹರಿಸುವುದು, ಉಳುಮೆ ಹಾಗೂ ಬಿತ್ತನೆ ಕಾರ್ಯ ಕೈಗೊಳ್ಳಲು ತೊಂದರೆಯಾಗುತ್ತಿದೆ ಎಂದು ರೈತ ದತ್ತಾತ್ರೆ ಸ್ವಾಮಿ ತಿಳಿಸಿದ್ದಾರೆ.
ಜಾನುವಾರುಗಳು ಹಾಗೂ ರೈತರು ಹೊಲದಲ್ಲಿ ಸಂಚರಿಸುವ ವೇಳೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಇಲಾಖೆ ಸಿಬ್ಬಂದಿಗೆ ಸಾಕಷ್ಟು ಸಲ ಮಾಹಿತಿ ನೀಡಿದ್ದರೂ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವಿದ್ಯುತ್ ತಂತಿ ದುರಸ್ತಿ ಪಡಿಸಿ ರೈತರ ಆತಂಕ ನಿವಾರಿಸಬೇಕು ಎಂದು ಗ್ರಾಮಸ್ಥರು ಹಾಗೂ ರೈತ ಪ್ರಮುಖರು ಒತ್ತಾಯಿಸಿದ್ದಾರೆ.