ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಮಾಡಿ

ಸುರಪುರ ರಾಜ್ಯ ರೈತ ಸಂಘ-ಹಸಿರು ಸೇನೆ ತಾಲೂಕು ಸಮಿತಿ ಪದಾಧಿಕಾರಿಗಳು ವಿವಿಧ ಬೇಡಿಕೆಗೆ ಆಗ್ರಹಿಸಿ ಸುರಪುರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಿದರು. ಅಯ್ಯಣ್ಣ ಹಾಲಭಾವಿ,ತಿಪ್ಪಣ್ಣ ಜಂಪಾ, ಮಲ್ಲಣ್ಣ ಹಾಲಬಾವಿ,ಹಣಮಂತ್ರಾಯ ಚಂದಲಾಪೂರ, ವೆಂಕಟೇಶಗೌಡ ಕುಪಗಲ್​, ಸಾಹೇಬಗೌಡ ಮದಲಿಂಗನಾಳ, ಹಣಮಗೌಡ ನಾರಾಯಣಪುರ ಇತರರಿದ್ದರು
ಸುರಪುರ ರಾಜ್ಯ ರೈತ ಸಂಘ-ಹಸಿರು ಸೇನೆ ತಾಲೂಕು ಸಮಿತಿ ಪದಾಧಿಕಾರಿಗಳು ವಿವಿಧ ಬೇಡಿಕೆಗೆ ಆಗ್ರಹಿಸಿ ಸುರಪುರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಿದರು. ಅಯ್ಯಣ್ಣ ಹಾಲಭಾವಿ,ತಿಪ್ಪಣ್ಣ ಜಂಪಾ, ಮಲ್ಲಣ್ಣ ಹಾಲಬಾವಿ,ಹಣಮಂತ್ರಾಯ ಚಂದಲಾಪೂರ, ವೆಂಕಟೇಶಗೌಡ ಕುಪಗಲ್​, ಸಾಹೇಬಗೌಡ ಮದಲಿಂಗನಾಳ, ಹಣಮಗೌಡ ನಾರಾಯಣಪುರ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘ-ಹಸಿರು ಸೇನೆ ತಾಲೂಕು ಸಮಿತಿ ಆಗ್ರಹ
  • ವಿವಿಧ ಬೇಡಿಕೆ ಈಡೇರಿಸಬೇಕೆಂದು ತಹಸೀಲ್ದಾರ್​ಗೆ ಮನವಿ
ಸುರಪುರ: ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ವಿವಿಧ ಸ್ಥಳಿಯ ಅಭಿವೃದ್ಧಿ ಕಾಮಗಾರಿಗಳಿಗೆ ಆಗ್ರಹಿಸಿ ಶುಕ್ರವಾರ ಇಲ್ಲಿನ ಗಾಂಧೀಜಿ ವೃತ್ತದಲ್ಲಿ ರಾಜ್ಯ ರೈತ ಸಂಘ-ಹಸಿರು ಸೇನೆ ತಾಲೂಕು ಸಮಿತಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡರು, ಕಳೆದ 3-4 ವರ್ಷಗಳಿಂದ ಸತತವಾಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ರಸಗೊಬ್ಬರ, ಕೀಟನಾಶಕ ಹಾಗೂ ಬಿತ್ತನೆ ಬೀಜಗಳ ಬೆಲೆ ಗಗನಕ್ಕೇರಿದ್ದು, ಸರ್ಕಾರಗಳು ಇವುಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರಿಯಾಯತಿ ದರದಲ್ಲಿ ಕಾಲಕಾಲಕ್ಕೆ ಒದಗಿಸಬೇಕು. ಕಳಪೆ ಗುಣಮಟ್ಟದ ಬೀಜ-ಗೊಬ್ಬರ ಮಾರಾಟವಾಗದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಎಲ್ಲ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (ಎಂಎಸ್​ಪಿ) ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ರೈತರು ಕೃಷಿ ಚಟುವಟಿಕೆಗಳಿಗಾಗಿ ಟ್ರ್ಯಾಕ್ಟರ್​ಗಳಿಗೆ ಡೀಸೆಲ್​ ಪಡೆಯಲು ಪೆಟ್ರೋಲ್​ ಬಂಕ್​ಗಳಿಗೆ ಹೋದಾಗ ಡಬ್ಬಿಗಳಲ್ಲಿ ಇಂಧನ ನೀಡಲು ಬಂಕ್​ ಮಾಲೀಕರು ನಿರಾಕರಿಸುತ್ತಿದ್ದಾರೆ. ಇದರಿಂದ ರೈತರಿಗೆ ಕೃಷಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ನಿವಾರಿಸಲು ಪ್ರತಿ ಪೆಟ್ರೋಲ್​ ಬಂಕ್​ಗೆ ಇಬ್ಬರು ಪೊಲೀಸ್​ರನ್ನು ನೇಮಿಸಿ ರೈತರಿಗೆ ಸುಗಮವಾಗಿ ಇಂಧನ ದೊರೆಯುವಂತೆ ಅನುಕೂಲ ಮಾಡಿಕೊಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ, ಉಪಾಧ್ಯ ತಿಪ್ಪಣ್ಣ ಜಂಪಾ, ತಾಲೂಕು ಸಮಿತಿ ಗೌರವಾಧ್ಯ ಮಲ್ಲಣ್ಣ ಹಾಲಬಾವಿ, ಅಧ್ಯ ಹಣಮಂತ್ರಾಯ ಚಂದಲಾಪೂರ, ಕಾರ್ಯದರ್ಶಿ ವೆಂಕಟೇಶಗೌಡ ಕುಪಗಲ್​, ಹುಣಸಗಿ ತಾಲೂಕು ಸಮಿತಿ ಗೌರವಾಧ್ಯ ಸಾಹೇಬಗೌಡ ಮದಲಿಂಗನಾಳ, ಅಧ್ಯ ಹಣಮಗೌಡ ನಾರಾಯಣಪೂರ, ಮುಖಂಡರಾದ ಭೀಮಣ್ಣ ತಿಪ್ಪನಟಗಿ, ಭೀಮನಗೌಡ ಕರ್ನಾಳ, ರಾು ಕುಪಗಲ್​, ನಾಗಪ್ಪ ಕುಪಗಲ್​, ಶಿವನಗೌಡ ರುಕ್ಮಾಪೂರ, ಮೌನೇಶ ಅರಳಹಳ್ಳಿ, ಪ್ರಭು, ನಿಂಗನಗೌಡ, ಮೋದಿನ್​ ಬೇವಿನಾಳ, ಭೀಮರಾಯ ಒಕ್ಕಲಿಗ, ಖುದಾಭ, ಯಂಕೋಬ ದೊರೆ ಕುಪಗಲ್​, ಶಾಂತಪ್ಪ ತಿಪ್ಪನಟಗಿ, ಭೀಮನಗೌಡ ಸೂಗೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net