ಕಸ ಹಾಕುವ ವಿಚಾರಕ್ಕೆ ಐವರ ಮೇಲೆ ಹಲ್ಲೆ

Five people attacked for littering
Five people attacked for littering
Published on
ಚಿಂತಾಮಣಿ: ಕೆಂಪದೇನಹಳ್ಳಿಯಲ್ಲಿ ಕಸ ಹಾಕುವ ಮತ್ತು ಧರಣಿಗೆ ಬೆಂಬಲ ನೀಡದ ವಿಚಾರಕ್ಕೆ 2 ಗುಂಪುಗಳ ನಡುವೆ ಗಲಾಟೆ ನಡೆದು ಒಂದೇ ಕುಟುಂಬದ ಐವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಲಾಗಿದೆ.
ಕೆಂಪದೇನಹಳ್ಳಿ ನಿವಾಸಿಗಳಾದ ಅಂಬರೀಶ (41), ಶಶಿಕುಮಾರ್​, ವೆಂಕಟರವಣಪ್ಪ, ಜಯಮ್ಮ ಮತ್ತು ನವೀನ್​ ಕುಮಾರ್​ ಹಲ್ಲೆಗೊಳಗಾಗಿ ಗಾಯಗೊಂಡಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಲತ ಹೊಸಕೋಟೆ ತಾಲೂಕಿನ ಅಪ್ಪಸಂದ್ರದ ಅಂಬರೀಶ್​ 18 ವರ್ಷಗಳ ಹಿಂದೆ ಕೆಂಪದೇನಹಳ್ಳಿಯ ಕವಿತಾ ಎಂಬುವವರನ್ನು ವಿವಾಹವಾಗಿ ಇಲ್ಲೇ ವಾಸವಾಗಿದ್ದಾರೆ. ಜೂ.14ರಂದು ಕುಟುಂಬದವರು ಗ್ರಾಮದ ಸರ್ಕಾರಿ ಶಾಲೆ ಪಕ್ಕದಲ್ಲಿರುವ ತಿಪ್ಪೆಗೆ ಕಸ ಹಾಕಲು ಹೋದಾಗ ದೇವರಾಜ್​ ಹಾಗೂ ಆತನ ಪತ್ನಿ ಆಶಾ ಇಲ್ಲಿ ತಿಪ್ಪೆ ಹಾಕಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅದೇ ದಿನ ಸಂಜೆ ಮತ್ತೆ ಕಸ ಹಾಕಲು ಹೋದಾಗ ದೇವರಾಜ್​, ಹರೀಶ್​, ಆನಂದ, ಯಶವಂತ್​, ಅಭಿಲಾಷ್​, ಈರಮ್ಮ, ಮುನಿಯಪ್ಪ, ಆಶಾ ಹಾಗೂ ನಾರಾಯಣಸ್ವಾಮಿ ಗುಂಪು ಕಟ್ಟಿಕೊಂಡು ಬಂದು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಸ್ಥಳದಲ್ಲಿದ್ದ ಅಂಬರೀಶ, ಶಶಿಕುಮಾರ್​, ನವೀನ್​ ಕುಮಾರ್​ ಮತ್ತು ವೆಂಕಟರವಣಪ್ಪ ಗಲಾಟೆ ಬಿಡಿಸಲು ಅಡ್ಡ ಹೋದಾಗ, ನಮ್ಮ ಊರಿನ ಧರಣಿಗೆ ನೀವು ಸಹಾಯ ಮಾಡಿಲ್ಲ. ಹಾಗಾಗಿ ನೀವು ಇಲ್ಲಿ ಕಸ ಹಾಕಬಾರದು ಎಂದು ನಿಂದಿಸಿ, ಹೊಡೆದಾಡಿದ್ದಾರೆ. ಎರಡು ಗುಂಪಿನ ಕಡೆಯಿಂದ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net