ದ್ರಾಕ್ಷಿ ಕಳವು ಮಾಡಿದ ಐವರ ಬಂಧನ

Five arrested for stealing grapes
Five arrested for stealing grapes
Published on
ಚಿಕ್ಕಬಳ್ಳಾಪುರ: ಕೊಳವನಹಳ್ಳಿಯ ರೈತನ ತೋಟದಿಂದ ದ್ರಾಕ್ಷಿಯನ್ನು ರಾತ್ರೋರಾತ್ರಿ ಕದ್ದು ಪರಾರಿಯಾಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಗುಡಿಬಂಡೆ ತಾಲೂಕು ಹಳೇಯರಹಳ್ಳಿಯ ವೈ.ಒ.ಅನಿಲ್​(21), ಬೆಂಗಳೂರು ನಗರ ಜಿಲ್ಲೆಯ ಚೆನ್ನಹಳ್ಳಿಯ ಸಿ.ಎಂ.ಅಂಬರೀಷ್​(33), ವೆಂಕಟೇಶ್​(27), ಗಸಾಲು ವೆಂಕಟೇಶ್​ (24), ಬೈನಹಳ್ಳಿಯ ವಿಶ್ವನಾಥ್​ (24) ಬಂಧಿತರು. ದ್ರಾಕ್ಷಿ ಮಾಲನ್ನು ಕದ್ದು ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಕೊಳವನಹಳ್ಳಿಯಲ್ಲಿನ ದೇವರಾಜ್​ ಎಂಬುವವರ ತೋಟದಲ್ಲಿ 2 ಟನ್​ ದ್ರಾ ಕಳೆದ ಜು.14ರಂದು ಕಳವಾಗಿತ್ತು. ರಾತ್ರಿ 10ರ ಬಳಿಕ ಲಗ್ಗೆ ಹಾಕಿದ್ದ ಆರೋಪಿಗಳು ಕಟಾವು ಮಾಡಿದ ದ್ರಾಯನ್ನು ಕತ್ತಲಿನಲ್ಲಿಯೇ ಹೆದ್ದಾರಿ ಸಮೀಪದಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಸಾಗಿಸಿದ್ದು, ಬಳಿಕ ಹೊರ ಭಾಗಕ್ಕೆ ತೆಗೆದುಕೊಂಡು ಹೋಗಿ ಮಾರಿದ್ದಾರೆ. ಆರೋಪಿಗಳು ದ್ರಾಕ್ಷಿ ಕಟ್ಟಿಂಗ್​ ಕೆಲಸ ಮಾಡುತ್ತಿದ್ದರು. ಅಕ್ರಮ ಮಾರ್ಗದಲ್ಲಿ ಹಣ ಸಂಪಾದನೆಗಾಗಿ ಕಳವಿಗೆ ಯೋಜನೆ ರೂಪಿಸಿದ್ದಾರೆ. ಅದರಂತೆ ವ್ಯಾಪಾರಿಗಳ ಸೋಗಿನಲ್ಲಿ ತೋಟಕ್ಕೆ ಬಂದು ದ್ರಾ ಇಳುವರಿ ನೋಡಿಕೊಂಡು ಹೋಗಿದ್ದರು.
ನಂದಿಗಿರಿಧಾಮ ಠಾಣೆಗೆ ದೂರು ನೀಡಲಾಗಿತ್ತು. ಪ್ರಗತಿಪರ ರೈತರು, ವಿವಿಧ ಸಂಟನೆಗಳ ಮುಖಂಡರು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಶಾಲ್​ ಚೌಕ್ಸೆಗೆ ಮನವಿ ಸಲ್ಲಿಸಿ, ಕಳ್ಳರ ಬಂಧನಕ್ಕೆ ಒತ್ತಾಯಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತ್ವರಿತವಾಗಿ ಪ್ರಕರಣ ಭೇದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net