ಅಭಿವೃದ್ಧಿ ಯೋಜನೆಗೆ ಪ್ರಥಮ ಆದ್ಯತೆ

ಕೆಂಗನಾಳ ಗ್ರಾಮದ ಹಳ್ಳಕ್ಕೆ ಅಡ್ಡಲಾಗಿ ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಭೂಮಿ ಪೂಜೆ ನೆರವೇರಿಸಿದರು. ಆರ್.ಎಸ್. ರೇವಶೆಟ್ಟಿ, ಶರಣಗೌಡ ಪಾಟೀಲ, ಸಿ.ಎನ್. ಬರಡೋಲ, ಆರ್.ಸಿ. ರೇವಶೆಟ್ಟಿ ಇತರರಿದ್ದರು.
ಕೆಂಗನಾಳ ಗ್ರಾಮದ ಹಳ್ಳಕ್ಕೆ ಅಡ್ಡಲಾಗಿ ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಭೂಮಿ ಪೂಜೆ ನೆರವೇರಿಸಿದರು. ಆರ್.ಎಸ್. ರೇವಶೆಟ್ಟಿ, ಶರಣಗೌಡ ಪಾಟೀಲ, ಸಿ.ಎನ್. ಬರಡೋಲ, ಆರ್.ಸಿ. ರೇವಶೆಟ್ಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಶೋಕ ಮನಗೂಳಿ ಹೇಳಿಕೆ
  • ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
ತಾಂಬಾ: ಸಿಂದಗಿ ಮತಕ್ಷೇತ್ರದಲ್ಲಿ ನೀರಾವರಿ, ಶಿಕ್ಷಣ ಮತ್ತು ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಕೆಂಗನಾಳ ಗ್ರಾಮದ ಹಳ್ಳಕ್ಕೆ ಅಡ್ಡಲಾಗಿ ಐದುವರೆ ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಮಾತನಾಡಿದ ಅವರು, ಈ ಯೋಜನೆಯಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಅನುಕೂಲವಾಗುತ್ತದೆ. ಇಪ್ಪತ್ತು ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಯಾಗಲಿದೆ. ಗ್ರಾಮದ ಅಭಿವೃದ್ಧಿಗೆ ರೈತರ ಬೆಳೆಗಳಿಗೆ ಪೂರಕವಾಗಲಿದೆ ಎಂದರು.
ಆರ್.ಎಸ್. ರೇವಶೆಟ್ಟಿ ಮಾತನಾಡಿ, ಶಾಸಕ ಮನಗೂಳಿ ನೀರಾವರಿಗೆ ಆದ್ಯತೆ ನೀಡಿ ಹಳ್ಳಕ್ಕೆ ಬ್ಯಾರೇಜ್ ಮಾಡುತ್ತಿದ್ದು, ಕೃಷಿಕರಿಗೆ ಎಲ್ಲ ರೀತಿ ಅನುಕೂಲವಾಗಲಿದೆ. ಈಗಾಗಲೇ ಅವರ ತಂದೆ ದಿ. ಎಂ.ಸಿ. ಮನಗೂಳಿ ಅವರು ತಂದಿದ್ದ ಗುತ್ತಿ ಬಸವಣ್ಣ ನೀರಾವರಿ ಯೋಜನೆ ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.
ಶರಣಗೌಡ ಪಾಟೀಲ, ಸಿ.ಎನ್. ಬರಡೋಲ, ಆರ್.ಸಿ. ರೇವಶೆಟ್ಟಿ, ಭಿಮಾಶಂಕರ ಜಾಧವ, ಸಿದ್ಧನಗೌಡ ಮದಭಾವಿ, ಹಾಜಿಸಾಲ ಮುಲ್ಲಾ, ರಾಜುಗೌಡ ಪಾಟೀಲ, ಶಿವಾನಂದ ಆತ್ಮೂರ, ಆರ್.ಎಸ್. ರೇವಶೆಟ್ಟಿ, ಎಂ.ಎಸ್. ಬಿಸನಾಳ, ಎ.ಎಸ್. ಸರಸಂಬಿ, ಕಾಸುಗೌಡ ಮದಭಾವಿ, ಸಂಗಮೇಶ ಹಿರೋಳ್ಳಿ, ಚಂದ್ರಕಾಂತ ಹೊಸಮನಿ, ಮಲೀಕ ಮುಲ್ಲಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net