ಇಬ್ಬರು ಉಪ ನಿರ್ದೇಶಕರಿಗೆ ದಂಡ

ಬಿ.ವೆಂಕಟಸಿಂಗ್​
ಬಿ.ವೆಂಕಟಸಿಂಗ್​
Published on

ಪ್ರಮುಖ ಮುಖ್ಯಾಂಶಗಳು

  • ಸಮಾಜ ಕಲ್ಯಾಣ ಇಲಾಖೆ
ಕಲಬುರಗಿ: ಸಕಾಲಕ್ಕೆ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿ ಆಯೋಗದ ಆದೇಶ ಪಾಲನೆ ಮಾಡದ ಸಮಾಜ ಕಲ್ಯಾಣ ಇಲಾಖೆಯ ಇಬ್ಬರು ಉಪ ನಿರ್ದೇಶಕರಿಗೆ ಮಾಹಿತಿ ಆಯೋಗ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ.ವೆಂಕಟಸಿಂಗ್​ ದಂಡ ವಿಧಿಸಿದ್ದಾರೆ.
ರಾಯಚೂರಿನ ರಂಗಲಿಂಗನ ಗೌಡ ಎನ್ನುವವರು ಮಾಹಿತಿ ಹಕ್ಕು ಅಧಿನಿಯಮದಡಿ ಕೇಳಿದ ಮಾಹಿತಿಯನ್ನು ಎರಡು ವರ್ಷವಾದರೂ ನೀಡದ ಕಾರಣ ಅವರು ಆಯೋಗಕ್ಕೆ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ಆಯೋಗ ರಾಯಚೂರಿನಲ್ಲಿ ಈ ಹಿಂದೇ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮೀ ಗೆ 10 ಸಾವಿರ ಹಾಗೂ ರಾಯಚೂರಿನ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಪ್ಪ ಅವರಿಗೆ 5 ಸಾವಿರ ರೂ. ದಂಡ ವಿಧಿಸಿದೆ.
ಮೇಲ್ಮನವಿದಾರರು ಕೋರಿದ ಮಾಹಿತಿ ನೀಡುವಂತೆ ಆಯೋಗ ಮಾಡಿದ ಆದೇಶ ಪಾಲನೆ ಮಾಡದೆ ಹಾಗೂ ವಿಚಾರಣೆಗೂ ಹಾಜರಾಗದ ಕಾರಣ ಹಾಲಿ ಶಹಾಪುರ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮೀ ಅವರಿಗೆ ಈ ಹಿಂದೆ 5 ಸಾವಿರ ರೂ.ದಂಡ ವಿಧಿಸಿ ಈ ದಂಡ ಪಾವತಿ ಮಾಡಿ ಮುಂದಿನ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡುವಂತೆ ಆಯೋಗ ಮಾಡಿದ ಆದೇಶ ಪಾಲನೆ ಮಾಡದೆ ರ್ನಿಲಕ್ಷ್ಯ ತೋರಿದ ಕಾರಣ ದಂಡದ ಪ್ರಮಾಣ 10 ಸಾವಿರ ರೂ.ಗೆ ಹೆಚ್ಚಿಸಿ ಆಯೋಗ ಆದೇಶ ಮಾಡಿದೆ.
ರಾಯಚೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಪ್ಪ ಅವರಿಗೆ ಮೇಲ್ಮನವಿದಾರರು ಕೋರಿದ ಮಾಹಿತಿ ನೀಡಿ, ಮುಂದಿನ ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಆಯೋಗ ಆದೇಶ ಮಾಡಿತ್ತು. ಆದರೆ ಆಯೋಗದ ಆದೇಶ ಪಾಲನೆ ಮಾಡದೆ ರ್ನಿಲ್ಯ ತೋರಿದ ಕಾರಣ ಅವರಿಗೂ 5 ಸಾವಿರ ರೂ. ದಂಡ ವಿಧಿಸಲಾಗಿದೆ.
ಉಭಯ ಅಧಿಕಾರಿಗಳಿಗೆ ವಿಧಿಸಿದ ದಂಡ ವಸೂಲಿಗೆ ಕ್ರಮ ವಹಿಸಿ ಮುಂದಿನ ವಿಚಾರಣೆ ವೇಳೆ ವರದಿ ನೀಡುವಂತೆ ರಾಯಚೂರು ಮತ್ತು ಯಾದಗಿರ ಜಿಲ್ಲೆಯ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪ್ರವಿಣಕುಮಾರ ಹಾಗೂ ಚಿದಾನಂದಪ್ಪ ಅವರಿಗೆ ನಿರ್ದೇಶಿಸಿದೆ. ತಪ್ಪಿದಲ್ಲಿ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 20(2) ರಡಿ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶ ಮಾಡಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net