ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ 1,000 ದಂಡ ವಿಧಿಸಲಾಗುತ್ತದೆ ಮತ್ತು ಡೆವಿಂಗ್ ಲೈಸೆನ್ಸ್ 3 ತಿಂಗಳವರೆಗೆ ಅಮಾನತುಗೊಳ್ಳಬಹುದು. ಜತೆಗೆ ಅರ್ಧ ಹೆಲ್ಮೆಟ್ಗೂ ದಂಡವಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ಇದರ ಕಟ್ಟುನಿಟ್ಟಿನ ಜಾರಿ ಆರಂಭವಾಗಿದ್ದು, ಪೆಟ್ರೋಲ್ ಬಂಕ್ಗಳಲ್ಲಿಯೂ ಹೆಲ್ಮೆಟ್ ಧರಿಸದೆ ಇರುವವರಿಗೆ ಪೆಟ್ರೋಲ್ ಹಾಕದಂತೆ ಸೂಚಿಸುವ ಮೂಲಕ ಹೆಲ್ಮೆಟ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕ ವಲಯದಲ್ಲಿ ಪೊಲೀಸರ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ.