ನಕಲಿ ಚಲನ್ ಸೃಷ್ಟಿಸಿ ದಂಡದ ಹಣ ಲೂಟಿ! ಖಾಕಿ ದಂಡ ಹಾಕಿದಂತೆ ದಾಖಲೆ ತಯಾರು

ಬೆಂಗಳೂರು ರಸ್ತೆ
ಬೆಂಗಳೂರು ರಸ್ತೆ
Published on

ಪ್ರಮುಖ ಮುಖ್ಯಾಂಶಗಳು

  • ಶೇ.50 ರಿಯಾಯಿತಿ ಘೋಷಣೆ ಬೆನ್ನಲ್ಲೇ ಭಾರಿ ಹಗರಣ
  • ಆರ್ಟಿಒ ಚೆಕ್ಪೋಸ್ಟ್ಗಳಲ್ಲಿ ಸಾವಿರಾರು ವಾಹನಕ್ಕೆ ದಂಡ
  • ಸರ್ಕಾರದ ಖಜಾನೆ, ಕಂಪನಿ ಮಾಲೀಕರಿಗೆ ಭಾರಿ ಮೋಸ
  • ಕ್ರಿಮಿನಲ್ ಪ್ರಕರಣ ದಾಖಲಿಸಲು ಸಾರಿಗೆ ಇಲಾಖೆ ನಿರ್ಧಾರ

| ಕೀರ್ತಿನಾರಾಯಣ ಸಿ. ಬೆಂಗಳೂರು

ರಾಜ್ಯದಲ್ಲಿ ಹೊರರಾಜ್ಯ ವಾಹನ ಚಾಲಕರ ಕರಾಮತ್ತು ಬ್ರೇಕ್ ಸಾರಿಗೆ ಇಲಾಖೆಯು ವಾಹನಗಳ ಮೇಲೆ ವಿಧಿಸಿರುವ ದಂಡ ಪಾವತಿಸಲು ಶೇ.50 ರಿಯಾಯಿತಿ ಘೋಷಿಸಿರುವ ಬೆನ್ನಲ್ಲೇ ಬ್ರೇಕ್ ಇನ್ಸ್ಪೆಕ್ಟರ್ಗಳು ದಂಡ ವಿಧಿಸಿರುವಂತೆ ‘ನಕಲಿ ಚಲನ್’ಗಳನ್ನು ಸೃಷ್ಟಿಸಿ ದೊಡ್ಡ ಮೊತ್ತದ ವಂಚನೆ ಮಾಡಿರುವ ಜಾಲ ಪತ್ತೆಯಾಗಿದೆ.

ರಾಜ್ಯದಲ್ಲಿ ಸಂಚರಿಸುವ ಹೊರರಾಜ್ಯಗಳ ವಾಹನ ಚಾಲಕರೇ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಾದ ಮೊತ್ತ ಹಾಗೂ ವಾಹನ ಮಾಲೀಕರ ಹಣವನ್ನು ಲೂಟಿ ಹೊಡೆದಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗೋವಾ ಸೇರಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಸಾವಿರಾರು ವಾಣಿಜ್ಯ ವಾಹನಗಳು ಪ್ರತಿನಿತ್ಯ ರಾಜ್ಯದ ಮೂಲಕ ಸಂಚರಿಸುತ್ತವೆ.

ಮೋಟಾರು ವಾಹನ ಕಾಯ್ದೆ ಅನ್ವಯ ನಿಯಮಗಳನ್ನು ಪಾಲಿಸದ ವಾಹನಗಳಿಗೆ ಚೆಕ್ಪೋಸ್ಟ್ಗಳಲ್ಲಿ ದಂಡ ವಿಧಿಸಲಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡು 2023, 2024 ಮತ್ತು 2025ನೇ ಅವಧಿಯಲ್ಲಿ ನಕಲಿ ಚಲನ್ಗಳನ್ನು ಸೃಷ್ಟಿಸಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಪಟ್ಟ ದಾಖಲಾತಿಗಳು ವಿಜಯವಾಣಿಗೆ ಲಭ್ಯವಾಗಿವೆ.

ವಂಚನೆ ಹೇಗೆ?

  • ರಾಜ್ಯದ ಚೆಕ್ಪೋಸ್ಟ್ಗಳಲ್ಲಿ ದಂಡ ಪಾವತಿಸಿರುವಂತೆ ನಕಲಿ ಚಲನ್ಗಳ ಸೃಷ್ಟಿ
  • ಬ್ರೇಕ್ ಇನ್ಸ್ಪೆಕ್ಟರ್ಗಳೇ ದಂಡ ವಿಧಿಸಿರುವಂತೆ ನಕಲಿ ಚಲನ್ ಮೇಲೆ ನಮೂದು
  • ಅದೇ ಚಲನ್ಗಳನ್ನು ಕಂಪನಿಗಳಿಗೆ ಸಲ್ಲಿಸಿ, ದಂಡದ ಮೊತ್ತ ಪಡೆಯುವುದು
  • ಒಂದೇ ಕಂಪನಿಗೆ ಸೇರಿದ 199 ವಾಹನಗಳ ದಂಡ ಪಾವತಿ ಚಲನ್ ನಕಲಿ ಪತ್ತೆ
  • ಪ್ರತಿನಿತ್ಯ ಸಾವಿರಾರು ವಾಹನ ಸಂಚರಿಸುತ್ತಿದ್ದು, ದೊಡ್ಡ ಮೊಟ್ಟದಲ್ಲಿ ದಂಧೆ ಶಂಕೆ

ಯಾರಿಗೆ ನಷ್ಟ?

  • ನಕಲಿ ಚಲನ್ ಸೃಷ್ಟಿಸುವುದರಿಂದ ಆರ್ಟಿಒ ಅಧಿಕಾರಿಗಳ ಹೆಸರು ದುರ್ಬಳಕೆ
  • ಅಧಿಕಾರಿಗಳು ವಾಹನ ತಡೆದು ಪರಿಶೀಲಿಸಿದಾಗ ದಂಡ ಪಾವತಿ ದಾಖಲೆ ತೋರಿಸಿ ಮೋಸ
  • ಸರ್ಕಾರದ ಖಜಾನೆಗೆ ಸೇರಬೇಕಾದ ದಂಡದ ಮೊತ್ತ 3ನೇ ವ್ಯಕ್ತಿಗಳ ಜೇಬು ಸೇರುತ್ತಿದೆ
  • ಕೆಲಸ ಕೊಟ್ಟ ಕಂಪನಿಗೂ ವಂಚನೆ ಒಟ್ಟು ಒಂಬತ್ತು ಚೆಕ್ಪೋಸ್ಟ್!

ಹೊಸಪೇಟೆ, ಬಾಗೇಪಲ್ಲಿ, ಮುಳಬಾಗಿಲು, ಅತ್ತಿಬೆಲೆ, ಚಿತ್ರದುರ್ಗ, ಝುಳಕಿ, ಕೊಪ್ಪಳ, ನೆಲಮಂಗಲ, ನಿಪ್ಪಾಳಿ ಆರ್ಟಿಒ ಚೆಕ್ಪೋಸ್ಟ್ಗಳಲ್ಲಿ ಬ್ರೇಕ್ ಇನ್ಸ್ಪೆಕ್ಟರ್ಗಳು ನಿಯಮ ಉಲ್ಲಂಘನೆಗೆ ದಂಡ ವಿಧಿಸಿರುವ ಚಲನ್ಗಳನ್ನು ಸೃಷ್ಟಿ ಮಾಡಿರುವುದು ಪತ್ತೆಯಾಗಿದೆ. ಕಂಪನಿಗಳ ಮಾಲೀಕರ ಮನವಿ ಮೇರೆಗೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲು ಸಾರಿಗೆ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಆರ್ಟಿಒ ಅಧಿಕಾರಿಗಳ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿರುವುದರಿಂದ ಇಲಾಖೆಗೆ ಕೆಟ್ಟ ಹೆಸರು. ಹೀಗಾಗಿ ಸಿಸಿಬಿ ಅಥವಾ ಸಿಐಡಿಯಿಂದ ತನಿಖೆ ನಡೆಸಿ, ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಹಿರಿಯ ಅಧಿಕಾರಿಗಳು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net