ಸದ್ಗುಣದಿಂದ ಭಗವಂತನ್ನು ಕಾಣಿರಿ

Find God through virtue.
Find God through virtue.
Published on
pn halli ಪಟ್ಟನಾಯಕನಹಳ್ಳಿನಮ್ಮಲಿರುವ ಗುಣ ಮತ್ತು ವ್ಯಕ್ತಿತ್ವದಿಂದಲೇ ಭಗವಂತನನ್ನು ಕಾಣಲು ಸಾಧ್ಯ ಎಂದು ಸ್ಫಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.
ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಭಾನುವಾರ ಶ್ರೀ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಧರ್ಮಧ್ವಜ ಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾವೆಲ್ಲರೂ ಭಗವಂತನ ಅಂಶವೇ, ಅದನ್ನು ನಾವು ತಿಳಿದುಕೊಳ್ಳಲು ಭಗವಂತ ಮನುಷ್ಯ ಜನ್ಮ ನೀಡಿದ್ದಾನೆ. ಮನುಷ್ಯತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಅರ್ಥ ಮಾಡಿಕೊಂಡರೆ ಅದೇ ಧರ್ಮ. ನಮ್ಮ ನಾಡಿನ ಸನಾತನ ಧರ್ಮ, ಪರಂಪರೆ ಉಳಿಸಬೇಕೆಂಬ ಉದ್ದೇಶದಿಂದ ಜಾತ್ರೆ, ಹಬ್ಬ ನಡೆಯುತ್ತವೆ. ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಮುನ್ನಡೆದಾಗ ಮನುಷ್ಯ ಜನ್ಮ ಸಾರ್ಥಕತೆ ಕಾಣಲಿದೆ ಎಂದರು.
ಬಮುಲ್​ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಶ್ರೀಮಠದ ಕಾರ್ಯನಿರ್ವಾಹಕ ತಮ್ಮಣ್ಣ, ನಾದೂರು ಗ್ರಾಪಂ ಅಧ್ಯೆ ತುಳಸಿ ಮಧುಸೂದನ್​, ಮಾಜಿ ಅಧ್ಯಕ್ಷರಾದ ಮೆಹರ್​ ತಾಜ್​ ಬಾಬು, ಮೇಘಶ್ರೀ ನವೀನ್​, ಸದಸ್ಯ ಭೂತ ರಾಜು, ನಿರಂಜನ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net