ಆದಿತ್ಯ ಬಿರ್ಲಾ ಸನ್ ಲೈಫ್ ಪೆನ್ಶನ್ ಫಂಡ್ ನ ಒಟ್ಟಾರೆ ಗ್ರಾಹಕರ ಪೈಕಿ 10 ರಿಂದ 14 ವರ್ಷ ವಯಸ್ಸಿನ ಮಕ್ಕಳು ‘ಎನ್ ಪಿ ಎಸ್ ವಾತ್ಸಲ್ಯ’ ಯೋಜನೆಯ ಶೇ. 36.9ರಷ್ಟು ಗ್ರಾಹಕರಾಗಿದ್ದಾರೆ. ನಂತರ 5–9 ವರ್ಷ ವಯಸ್ಸಿನ ಮಕ್ಕಳು ಶೇ.31.6ರಷ್ಟು ಪಾಲು ಹೊಂದಿದ್ದಾರೆ. 15–19 ವರ್ಷ ವಯಸ್ಸಿನವರು ಶೇ. 21.1ರಷ್ಟು ಇದ್ದರೆ, 0–4 ವರ್ಷ ವಯಸ್ಸಿನ ಮಕ್ಕಳು ಶೇ. 10.4ರಷ್ಟು ಇದ್ದಾರೆ. ಒಟ್ಟಾರೆ ಶೇ.68.5ರಷ್ಟು ಗ್ರಾಹಕರು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ.