12ಕ್ಕೆ ಶ್ರೀ ಸುಧಾ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್​​ನ ಸುವರ್ಣ ಮಹೋತ್ಸವ ಕಾರ್ಯಕ್ರಮ- Golden Jubilee Celebration

ಬ್ಯಾಂಕ್​ ಅಧ್ಯಕ್ಷ ಡಾ.ತಿಮ್ಮೇಗೌಡ
ಬ್ಯಾಂಕ್​ ಅಧ್ಯಕ್ಷ ಡಾ.ತಿಮ್ಮೇಗೌಡ
Published on
ಬೆಂಗಳೂರು: ಐವತ್ತು ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ಶ್ರೀ ಸುಧಾ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್​​ನ ಸುವರ್ಣ ಮಹೋತ್ಸವ ಕಾರ್ಯಕ್ರಮ ಸೆ.12ರಂದು ಜೆ.ಪಿ.ನಗರದ 1ನೇ ಹಂತದ ಸಿಂಧೂರ್​ ಕನ್​​ವೆನ್​ಷನ್​ ಸೆಂಟರ್​ನಲ್ಲಿ ನಡೆಯಲಿದೆ.
ಬ್ಯಾಂಕ್​​ 11 ಶಾಖೆಗಳನ್ನು ಹೊಂದಿದೆ; ಮೈಸೂರು, ಬೆಂಗಳೂರು, ಕಲಬುರಗಿಯಲ್ಲಿ ನೂತನ ಶಾಖೆ ತೆರೆಯಲಾಗುವುದು. 16 ಸಾವಿರ ಸದಸ್ಯರನ್ನು ಹೊಂದಿದ್ದು, ಯಾವುದೇ ಮಧ್ಯವರ್ತಿ ಇಲ್ಲದೆ ಗ್ರಾಹಕರಿಗೆ ನೇರವಾಗಿ ವಾಹನ, ವಿದ್ಯಾಭ್ಯಾಸ, ವ್ಯಾಪಾರಕ್ಕಾಗಿ ಸಾಲ ನೀಡಲಾಗುತ್ತಿದೆ. ಇಡೀ ಕರ್ನಾಟಕದಲ್ಲೇ ಉತ್ತಮ ಸಹಕಾರಿ ಬ್ಯಾಂಕ್ ಎಂದು ಗುರುತಿಸಿಕೊಂಡಿದೆ ಎಂದು ಬ್ಯಾಂಕ್​ ಅಧ್ಯಕ್ಷ ಡಾ.ತಿಮ್ಮೇಗೌಡ ಮಾಹಿತಿ ನೀಡಿದರು.
ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ವಿಳಾಸ,ವಾರಸುದಾರರು ಇಲ್ಲದೆ RBIನ DEAFನಿಧಿಗೆ ವರ್ಗಾವಣೆಯಾದ ಕನಿಷ್ಠ ನೂರು ಠೇವಣಿಗಳ ಠೇವಣಿದಾರರನ್ನು ಪತ್ತೆ ಹಚ್ಚಿ ಅವರಿಗೆ ಹಣವನ್ನು ಹಸ್ತಾಂತರಿಸಲಾಗುವುದು. ನಮ್ಮ ಬ್ಯಾಂಕ್​​ "ಸದೃಢ ಹಣಕಾಸು ನಿರ್ವಹಣಾ ಬ್ಯಾಂಕ್" ಎಂದು ಗುರುತಿಸಿಕೊಂಡಿದೆ. 50ನೇ ವರ್ಷ ಪೂರೈಸುವ ಹೊತ್ತಿಗೆ ಕನಿಷ್ಠ 500 ಕೋಟಿ ರೂ. ಠೇವಣಿ ಸಂಗ್ರಹ ಹಾಗೂ 350 ಕೋಟಿ ರೂ. ಸಾಲ ನೀಡುವ ಗುರಿಯನ್ನು ಬ್ಯಾಂಕ್ ಹೊಂದಿತ್ತು. ಅದನ್ನು ಯಶಸ್ವಿಯಾಗಿ ಸಾಧಿಸಲಾಗಿದೆ ಎಂದು ಬ್ಯಾಂಕಿನ ಉಪಾಧ್ಯಕ್ಷ ವಾಸನ್ ಸಂತಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಜಿ.ಒ.ಕೃಷ್ಣ, ಸತ್ಯನಾರಾಯಣಯ್ಯ, ಮುರಳಿ, ಶಶಿಕಿರಣ್, ಸಂಜೀವಯ್ಯ ಸೇರಿ ಪ್ರಧಾನ ವ್ಯವಸ್ಥಾಪಕಿ ಎಂ.ಎಸ್.ಕೋಕಿಲ, ಉಪ ಪ್ರಧಾನ ವ್ಯವಸ್ಥಾಪಕಿ ಪುಷ್ಪಲತಾ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net