ಐಪಿಎಲ್ ಪ್ಲೇಆಫ್ ಹಂತದ ಪಂದ್ಯಗಳ ತಾಣಗಳನ್ನು ಈಗಾಗಲೆ ಘೋಷಿಸಿದ್ದು, ಕ್ವಾಲಿಫೈಯರ್ ಎಲಿಮಿನೇಟರ್ ಮತ್ತು ಫೈನಲ್ ಪಂದ್ಯ ಆತಿಥ್ಯ ನಿರ್ಧರಿಸುವ ಹಕ್ಕು ಬಿಸಿಸಿಐಗೆ ಇದೆ. ಆದ್ದರಿಂದ, ನಾವು ಮೂರು ಸ್ಥಳಗಳನ್ನು ಆಯ್ಕೆ ಮಾಡಿದ್ದೇವೆ. ಬಿಸಿಸಿಐ ಶಿಷ್ಟಾಚಾರ ಪ್ರಕಾರ, ಹಾಲಿ ಚಾಂಪಿಯನ್‌ಗಳು ತನ್ನ ತವರು ಮೈದಾನದಲ್ಲಿ ಫೈನಲ್ ಮತ್ತು ಒಂದು ಪ್ಲೇಆಫ್ ಪಂದ್ಯವನ್ನು ಆಯೋಜಿಸಲು ಅರ್ಹರಾಗಿರುತ್ತಾರೆ. ಆರ್‌ಸಿಬಿ ಕಳೆದ ವರ್ಷ ಹಾಲಿ ಚಾಂಪಿಯನ್ ಆಗಿದ್ದರಿಂದ ಈ ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಸುವುದು ಸೂಕ್ತ ಎಂದು ನಿರ್ಧರಿಸಲಾಗಿತ್ತು. ಆದರೆ, ಇತ್ತೀಚಿನ ಬೆಳವಣಿಗೆಗಳಿಂದ ಉಂಟಾದ ಕೆಲವು ಸಂದರ್ಭಗಳಿಂದಾಗಿ, ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಪ್ಲೇಆಫ್ ಸ್ಥಳವನ್ನು ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಸೈಕಿಯಾ, ಫೈನಲ್ ಸ್ಥಳಾಂತರಕ್ಕೆ ಕಾರಣ ವಿವರಿಸಿದ್ದಾರೆ.