ಕೆರೆಗಳಿಗೆ ನದಿಮೂಲದಿಂದ ನೀರು ತುಂಬಿಸಿ

ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ತೆರಕಣಾಂಬಿ ಗ್ರಾಮದಲ್ಲಿ ರೈತರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಒತ್ತಾಯಿಸುತ್ತಿರುವುದು. ಕೆ.ಎಂ.ಮಹೇಶ್, ಮಹೇಶ್, ಬಿ.ಕೆ.ಶಿವಪ್ಪ ಇತರರಿದ್ದರು.
ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ತೆರಕಣಾಂಬಿ ಗ್ರಾಮದಲ್ಲಿ ರೈತರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಒತ್ತಾಯಿಸುತ್ತಿರುವುದು. ಕೆ.ಎಂ.ಮಹೇಶ್, ಮಹೇಶ್, ಬಿ.ಕೆ.ಶಿವಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಊರಿನ ಕೆರೆಗಳಿಗೆ ನದಿಮೂಲದಿಂದ ನೀರು ತುಂಬಿಸಿ
  • ತೆರಕಣಾಂಬಿಹುಂಡಿ, ಬಲಚವಾಡಿ ಹಾಗೂ ಬೆರಟಹಳ್ಳಿ ಗ್ರಾಮಸ್ಥರು
ಗುಂಡ್ಲುಪೇಟೆ: ಊರಿನ ಕೆರೆಗಳಿಗೆ ನದಿಮೂಲದಿಂದ ನೀರು ತುಂಬಿಸುವಂತೆ ತಾಲೂಕಿನ ತೆರಕಣಾಂಬಿಹುಂಡಿ, ಬಲಚವಾಡಿ ಹಾಗೂ ಬೆರಟಹಳ್ಳಿ ಗ್ರಾಮಸ್ಥರು ಸೋಮವಾರ ಕಾವೇರಿ ನೀರಾವರಿ ನಿಗಮದ ಅಧಿಕಾರಿಯನ್ನು ಒತ್ತಾಯಿಸಿದರು.
ಗ್ರಾಮದ ಚಾಮರಾಜನಗರ ರಸ್ತೆಯಲ್ಲಿ ಸಮಾವೇಶಗೊಂಡ ಮೂರೂ ಗ್ರಾಮಗಳ ರೈತರು, ಕೆರೆಗಳಿಗೆ ನೀರುಹರಿಸದ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ಶಿವಪ್ಪ ಮಾತನಾಡಿ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈಗಾಗಲೇ ಈ ಗ್ರಾಮಗಳ ಕೆರೆಗಳಿಗೆ ನೀರು ಹರಿಸದ ಪರಿಣಾಮ ಜನಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ತೀರಾ ಒತ್ತಡ ಹಾಕಿದರೆ ಮಾತ್ರ ಕೆಲವು ಗಂಟೆಗಳ ಕಾಲ ನೀರು ಹರಿಸಿ ಮತ್ತೆ ಬಂದ್ ಮಾಡುತ್ತಿದ್ದಾರೆ. ನೀರು ಹರಿಸುವಂತೆ ಸ್ಥಳೀಯ ಶಾಸಕರು ನೀಡಿದ ಸೂಚನೆಯನ್ನೂ ಲೆಕ್ಕಿಸದೆ ನೀರು ಹರಿಸುವುದನ್ನು ನಿಲ್ಲಿಸಿದ್ದು ಇಷ್ಟಬಂದ ಕೆರೆಗಳಿಗೆ ನೀರು ಹರಿಸುತ್ತಿದ್ದಾರೆ. ಕೂಡಲೇ ಸ್ಥಳಕ್ಕೆ ನೀರಾವರಿ ನಿಗಮದ ಅಧಿಕಾರಿಗಳು ಆಗಮಿಸಬೇಕು. ಇಲ್ಲದಿದ್ದರೆ ರಸ್ತೆ ಸಂಚಾರ ತಡೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ಸ್ಥಳಕ್ಕೆ ಆಗಮಿಸಿದ ಕಾವೇರಿ ನೀರಾವರಿ ನಿಗಮದ ಇಂಬಿನಿಯರ್ ಮಹೇಶ್ ಮಾತನಾಡಿ, ಲಕ್ಕೂರು ಮತ್ತು ಬಲಚವಾಡಿ ಕೆರೆಗೆಳಿಗೆ ನೀರು ಹರಿಸುವ ಗೇಟ್‌ಗಳು ಕೆಟ್ಟಿವೆ. ಇದರಿಂದ ನೀರು ನಿಲ್ಲಿಸಲಾಗಿದ್ದು, 15 ದಿನಗಳಲ್ಲಿ ಇದನ್ನು ಸರಿಪಡಿಸಿದ ನಂತರ ನೀರು ಹರಿಸುವುದಾಗಿ ಹೇಳಿದ್ದು ರೈತರನ್ನು ಕೆರಳಿಸಿತು. ಕೇವಲ ಒಂದು ಗಂಟೆ ಸಮಯದಲ್ಲಿ ಇದರ ರಿಪೇರಿಯನ್ನು ಮಾಡಲು ಸಾಧ್ಯವಿದ್ದರೂ 15 ದಿನ ಕಾಲಾವಕಾಶ ಕೇಳುತ್ತಿದ್ದಾರೆ. ಇಂದೇ ರಿಪೇರಿ ಮಾಡಿಸಿ ನಾಳೆಯಿಂದಲೇ ನೀರುಹರಿಸುವಂತೆ ರೈತರು ಪಟ್ಟುಹಿಡಿದರು.
ಸ್ಥಳದಲ್ಲಿದ್ದ ತೆರಕಣಾಂಬಿ ಠಾಣೆಯ ಪಿಎಸ್‌ಐ ಕೆ.ಎಂ.ಮಹೇಶ್ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸಿ ಕೂಡಲೇ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಮುಂದಿನ ಹತ್ತು ದಿನಗಳಲ್ಲಿ ನೀರು ಹರಿಸುವ ಭರವಸೆ ನೀಡಿದ ನಂತರ ರೈತರು ಅಲ್ಲಿಂದ ತೆರಳಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಟಿ.ಎಸ್.ಮಹದೇವಸ್ವಾಮಿ(ರವಿಬುದ್ದಿ), ಜಲೇಂದ್ರ, ಎಪಿಎಂಸಿ ಮಾಜಿ ನಿರ್ದೇಶಕ ಮಹೇಶ್, ಮುಖಂಡರಾದ ಗುಂಡಪ್ಪ, ಗುರುದೇವಪ್ರಸಾದ್, ಬಿ.ಎಸ್.ಮಹೇಶ್, ಚಂದ್ರು, ಶಿವು ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net