ಅರ್ಜಿಯಲ್ಲಿ ಸರಿಯಾದ ಮಾಹಿತಿ ತುಂಬಿ

ಮಾನ್ವಿಯಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕಗೆ ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಎನ್ಯುಮರೇಷನ್ ಫಾರ್ಮ್ ವಿತರಿಸಿದರು. ರಾಜ ರಾಮಚಂದ್ರ ನಾಯಕ, ಉಪ ತಹಸೀಲ್ದಾರ್ ಚರಣಸಿಂಗ್, ಪುರಸಭೆಯ ಆನಂದಮ್ಮ ಇದ್ದರು.
ಮಾನ್ವಿಯಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕಗೆ ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಎನ್ಯುಮರೇಷನ್ ಫಾರ್ಮ್ ವಿತರಿಸಿದರು. ರಾಜ ರಾಮಚಂದ್ರ ನಾಯಕ, ಉಪ ತಹಸೀಲ್ದಾರ್ ಚರಣಸಿಂಗ್, ಪುರಸಭೆಯ ಆನಂದಮ್ಮ ಇದ್ದರು.
Published on
ಮಾನ್ವಿ: ತಾಲೂಕಿನ ಅರ್ಹ ಮತದಾರರ ಮನೆಗಳಿಗೆ ಬಿಎಲ್‌ಒಗಳು ಎನ್ಯುಮರೇಷನ್ ಫಾರ್ಮ್ ಅನ್ನು ದ್ವಿಪ್ರತಿಯಲ್ಲಿ ವಿತರಿಸಲಿದ್ದು, ಸರಿಯಾದ ಮಾಹಿತಿಯೊಂದಿಗೆ ತುಂಬಬೇಕು ಎಂದು ತಹಸೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಹೇಳಿದರು. 
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಮಂಗಳವಾರ, ಮೊದಲನೇ ದಿನ ಎನ್ಯುಮರೇಷನ್ ಅರ್ಜಿಯನ್ನು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕಗೆ ವಿತರಿಸಿ ಮಾತನಾಡಿದರು. 
30 ದಿನಗಳ ಕಾಲವಕಾಶವಿದ್ದು, ಮತದಾರರು ಭರ್ತಿ ಮಾಡಿ ನೀಡಿದಲ್ಲಿ ಮಾತ್ರ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರ್ಪಡೆಗೊಳ್ಳಲಿದೆ ಎಂದರು. ಜೆಡಿಎಸ್ ತಾಲೂಕು ಅಧ್ಯಕ್ಷ ಈರಣ್ಣ ಮರ್ಲಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net