ಜನರ ಹಿತಕ್ಕಾಗಿ ಹೋರಾಡಿದ್ರೆ ಸುಳ್ಳು ಮೊಕದ್ದಮೆ! protest

ವಿಜಯಪುರದಲ್ಲಿ ಎಐಕೆಕೆಎಂಎಸ್​ ಕಾರ್ಯಕರ್ತರ ಬಂಧನ ವಿರೋಧಿಸಿ ತಿಪಟೂರು ತಾಲೂಕು ಕಚೇರಿ ಎದುರು ಸಂಟನೆಯ ಕಾರ್ಯಕರ್ತರು Protest ಪ್ರತಿಭಟಿಸಿದರು.
ವಿಜಯಪುರದಲ್ಲಿ ಎಐಕೆಕೆಎಂಎಸ್​ ಕಾರ್ಯಕರ್ತರ ಬಂಧನ ವಿರೋಧಿಸಿ ತಿಪಟೂರು ತಾಲೂಕು ಕಚೇರಿ ಎದುರು ಸಂಟನೆಯ ಕಾರ್ಯಕರ್ತರು Protest ಪ್ರತಿಭಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ವಿರುದ್ಧ ಎ.ಐ.ಕೆ.ಕೆ.ಎಂ.ಎಸ್​ ಜಿಲ್ಲಾ ನಾಯಕ ಎಸ್​.ಎನ್​.ಸ್ವಾಮಿ ಆರೋಪ
ತಿಪಟೂರು: ಜ.1ರಂದು ವಿಜಯಪುರದಲ್ಲಿ ಸರ್ಕಾರಿ ಮೆಡಿಕಲ್​ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ protest ವಿಜಯಪುರ ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಎಐಕೆಕೆಎಂಎಸ್​ (ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ) ರಾಜ್ಯ ಕಾರ್ಯದರ್ಶಿ ಭಗವಾನ್​ ರೆಡ್ಡಿ ಹಾಗೂ ಮತ್ತಿತರ ನಾಯಕರನ್ನು ಬಂಧಿಸಿ, ಅವರ ಮೇಲೆ ಕೊಲೆ ಯತ್ನ ಎಂದು ಸುಳ್ಳು ಮೊಕದ್ದಮೆ ಹೂಡಿ, ನ್ಯಾಯಾಂಗ ಬಂಧನದಲ್ಲಿಟ್ಟಿರುವುದನ್ನು ವಿರೋಧಿಸಿ ಸೋಮವಾರ ನಗರದ ತಾಲೂಕು ಕಚೇರಿ ಎದುರು ಸಂಟನೆಯಿಂದ ಪ್ರತಿಭಟಿಸಿ, ತಹಸೀಲ್ದಾರ್​ ಜಿ.ವಿ.ಮೋಹನ್​ ಕುಮಾರ್​ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಟನೆಯ ಜಿಲ್ಲಾ ನಾಯಕ ಎಸ್​.ಎನ್​.ಸ್ವಾಮಿ ಮಾತನಾಡಿ, ನ್ಯಾಯಕ್ಕಾಗಿ, ಜನರ ಹಿತಕ್ಕಾಗಿ ಹೋರಾಟ ನಡೆಸುವವರ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಳ್ಳು ಮೊಕದ್ದಮೆ ಹೂಡಿ ಚಳವಳಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿವೆ. ನೂರಕ್ಕೂ ಹೆಚ್ಚು ದಿನಗಳಿಂದ ವಿಜಯಪುರದಲ್ಲಿ ಸಾರ್ವಜನಿಕ ಆಸ್ಪತ್ರೆಯನ್ನು ಖಾಸಗಿಯವರ ಮಡಿಲಿಗೆ ಒಪ್ಪಿಸಿ, ನೂರಾರು ಎಕರೆ ಜಮೀನನ್ನು ಖಾಸಗಿಯವರಿಗೆ ಪರಬಾರೆ ಮಾಡಲಾಗಿದೆ. ಖಾಸಗಿ ವೈದ್ಯಕಿಯ ಕಾಲೇಜನ್ನು ತೆರೆದು ಲಾಭಗಳಿಸಲು ಅನುವು ಮಾಡಿಕೊಡುವ ಸರ್ಕಾರದ ಕ್ರಮವನ್ನು ವಿರೋಧಿಸಿ, ಆ ಜಾಗದಲ್ಲಿ ಸರ್ಕಾರಿ ಕಾಲೇಜನ್ನು ಸ್ಥಾಪಿಸುವಂತೆ ಒತ್ತಾಯಿಸಿ ಹೋರಾಟ ನಡೆಯುತ್ತಿದೆ. ಆದರೆ ಸರ್ಕಾರ, ನ್ಯಾಯ ಕೇಳುವವರ ಧ್ವನಿಯನ್ನು ಅಡಗಿಸಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಈ ಟನೆಯು ಸರ್ಕಾರದ ಕಾಪೋರ್ರೇಟ್​- ಖಾಸಗೀಕರಣ ಪರ ನೀತಿಯನ್ನು ತೋರಿಸುತ್ತದೆ. ವಿಜಯಪುರದಲ್ಲಿ ನಡೆದ ಹೋರಾಟದ ವೀಡಿಯೋ ನೋಡಿದವರಿಗೆ ಕೊಲೆ ಪ್ರಯತ್ನದ ದೂರು ದಾಖಲಿಸಿರುವುದು ಹಾಸ್ಯಾಸ್ಪದವೆನಿಸುತ್ತದೆ. ಬರಿಗೈಲಿ ನಿಂತು, ಪ್ರತಿಭಟಿಸುತ್ತಾ. ಪೊಲೀಸರಿಂದ ಬಲವಂತವಾಗಿ ಬಂಧಿತರಾದವರು ಕೊಲೆ ಮಾಡಲು ಹೇಗೆ ಸಾಧ್ಯ?. ಈ ಕೂಡಲೇ ಬಂಧಿತ ನಾಯಕರನ್ನು ಬಿಡುಗಡೆ ಮಾಡಬೇಕು ಮತ್ತು ಅವರ ವಿರುದ್ಧ ದಾಖಲಾಗಿರುವ ಎಲ್ಲ ಮೊಕದ್ದಮೆಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ವಿಜಯಪುರದಲ್ಲಿ ಎಐಕೆಕೆಎಂಎಸ್​ ಕಾರ್ಯಕರ್ತರ ಬಂಧನ ವಿರೋಧಿಸಿ ತಿಪಟೂರು ತಾಲೂಕು ಕಚೇರಿ ಎದುರು ಸಂಟನೆಯ ಕಾರ್ಯಕರ್ತರು ಪ್ರತಿಭಟಿಸಿ, ತಹಸೀಲ್ದಾರ್​ ಜಿ.ವಿ.ಮೋಹನ್​ಕುಮಾರ್​ಗೆ ಮನವಿ ಸಲ್ಲಿಸಿದರು. ಎಸ್​.ಎನ್​.ಸ್ವಾಮಿ, ರಂಗಧಾಮಯ್ಯ, ಹಾಲ್ಕುರಿಕೆ ಪ್ರಶಾಂತ್​, ಪ್ರಸನ್ನ ಹಾಲೇನಹಳ್ಳಿ, ಪಾರ್ವತಮ್ಮ, ಚಂದ್ರಶೇಖರ್​, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net