ಆ.15ಕ್ಕೆ ಕಪ್ಪುಪಟ್ಟಿ ಧರಿಸಿ ಹೋರಾಟ / DODABALLAPUR

ಸರ್ಕಾರಿ ಜಾಗಗಳ ಭೂ ಕಬಳಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದೊಡ್ಡಬಳ್ಳಾಪುರದ ಕನ್ನಡಿಗರ ಕರವೇ ಮುಖಂಡರು  ಡಿವೈಎಸ್ಪಿ ಪಾಂಡುರಂಗ ಅವರಿಗೆ ಮನವಿ ಸಲ್ಲಿಸಿದರು. ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಯೇಗೌಡ,  ಕಾರ್ಯಾಧ್ಯಕ್ಷ ಪ್ರದಿಪ್​ ಕುಮಾರ್​,  ಯುವ ಘಟಕದ ಅಧ್ಯಕ್ಷ ರಂಜಿತ್​ ಗೌಡ ಇತರರು ಇದ್ದರು.
ಸರ್ಕಾರಿ ಜಾಗಗಳ ಭೂ ಕಬಳಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದೊಡ್ಡಬಳ್ಳಾಪುರದ ಕನ್ನಡಿಗರ ಕರವೇ ಮುಖಂಡರು ಡಿವೈಎಸ್ಪಿ ಪಾಂಡುರಂಗ ಅವರಿಗೆ ಮನವಿ ಸಲ್ಲಿಸಿದರು. ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಯೇಗೌಡ, ಕಾರ್ಯಾಧ್ಯಕ್ಷ ಪ್ರದಿಪ್​ ಕುಮಾರ್​, ಯುವ ಘಟಕದ ಅಧ್ಯಕ್ಷ ರಂಜಿತ್​ ಗೌಡ ಇತರರು ಇದ್ದರು.
Published on
ದೊಡ್ಡಬಳ್ಳಾಪುರ : ತಾಲೂಕಿನ ವಿವಿಧೆಡೆ ಸರ್ಕಾರಿ ಜಾಗ ಕಬಳಿಸುತ್ತಿರುವವರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಸರ್ಕಾರಿ ಅಧಿಕಾರಿಗಳ ರ್ನಿಲಕ್ಷ$್ಯ ಖಂಡಿಸಿ ಆ.15ರಂದು ಸ್ವಾತಂತ್ರೊ$್ಯತ್ಸವದಲ್ಲಿ ಕಪ್ಪು ಪಟ್ಟಿ ಧರಿಸಿ ಹೋರಾಟ ನಡೆಸಲಾಗುವುದು ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಎಚ್ಚರಿಸಿದ್ದಾರೆ.
ಡಿವೈಎಸ್ಪಿ ಪಾಂಡುರಂಗ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದವೇದಿಕೆ ಪ್ರಧಾನ ಕಾರ್ಯದರ್ಶಿ ಆರ್​.ರಮೇಶ್​, ಕರ್ನಾಟಕ ರಕ್ಷಣಾ ವೇದಿಕೆಯು ಭೂಗಳ್ಳರಿಂದ ಸರ್ಕಾರಿ ಜಾಗ ಕಬಳಿಕೆ ತಡೆಯುವ ಪ್ರಯತ್ನ ಮಾಡುತ್ತಲೇ ಬಂದಿದೆ. ಆದರೆ, ಈ ಪ್ರಯತ್ನಕ್ಕೆ ಸರ್ಕಾರಿ ಅಧಿಕಾರಿಗಳ ರ್ನಿಲಕ್ಷ$್ಯ ಎದ್ದುಕಾಣುತ್ತಿದೆ ಎಂದು ದೂರಿದರು.
ತಾಲೂಕಿನ ಕಸಬಾ ಹೋಬಳಿಯ ಗಂಗಾಧರಪುರದ ಸರ್ವೇ ನಂ. 17ರ ಸರ್ಕಾರಿ ಕುಂಟೆ 2-04 ಎ/ಗುಂ ಜಾಗವನ್ನು ಕುಂಟೆಯಾಗಿಯೇ ಉಳಿಸಬೇಕು. ಕಸಬಾ ಹೋಬಳಿಯ ಅರೇಹಳ್ಳಿಗುಡ್ಡದಹಳ್ಳಿ ಸರ್ವೇ ನಂ.57ರ ಸರ್ಕಾರಿ ಗೋಮಾಳದದಾಖಲೆಗಳನ್ನು ನಕಲಿ ಸೃಷ್ಟಿಸಿದ್ದು, ಈ ಜಾಗವನ್ನು ಉಳಿಸಬೇಕು ಎಂದು ಆಗ್ರಹಿಸಿದರು.
ರೋಜಿಪುರ ಸರ್ವೇ ನಂ.93ರ 0-23 ಗುಂಟೆ ಖರಾಬು ಜಾಗದಲ್ಲಿ ಖಾಸಗಿಯವರು ಕೈಗೊಂಡಿರುವ ಕಾಮಗಾರಿ ತಡೆಯುವುದು, ಗಂಗಾಧರಪುರ ಸರ್ವೇ ನಂ.124 ರಲ್ಲಿನ ಸ್ಮಶಾನದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಬೇಕು ಎಂದರು.
ದೊಡ್ಡಬಳ್ಳಾಪುರ ನಗರದ ಭಗತ್​ ಸಿಂಗ್​ ಕ್ರೀಡಾಂಗಣದ ಬಳಿ ಪರಿಶಿಷ್ಟ ಪಂಗಡದ ಹೆಣ್ಣುಮಕ್ಕಳ ವಿದ್ಯಾರ್ಥಿನಿಲಯಕ್ಕೆ ಮೀಸಲಿಟ್ಟ ಜಾಗ ಅತಿಕ್ರಮಿಸಲು ನಾಮಫಲಕ ಹಾಕಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು,ನಗರದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಮಠ ನಡೆಸುತ್ತಿರುವುದು, ಗಂಗಾಧರಪುರ ಸ.ನಂ. 111ರಲ್ಲಿದ್ದ ಪೊಲೀಸ್​ ಕ್ವಾರ್ಟಸ್​ ಜಾಗ ಕಬಳಿಸಲು ಯತ್ನಿಸಿದ್ದ ಭೂಗಳ್ಳರ ವಿರುದ್ಧ ಕಾನೂನು ಕ್ರಮವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಶ್ರೀ ಇವೆಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net