ಫೆ. 26 ರಂದು ಮಧ್ಯಾಹ್ನ 1.30ರಿಂದ 2 ರ ಮಧ್ಯೆ ಶಿರನಾಳ ಮತ್ತು ಅವಜಿ ಗ್ರಾಮದ ಮಧ್ಯೆ ಇರುವ ಬ್ಯಾರೇಜ್‌ಗೆ ಭೇಟಿ ನೀಡಿದ ಸಂದರ್ಭ ಈ ಘಟನೆ ನಡೆದಿದ್ದು, ಇಂಡಿ ನಗರಸಭೆಯ ಜಾಕ್‌ವೆಲ್ ನಿರ್ವಹಣೆಯ ಸಿಬ್ಬಂದಿಯನ್ನು ಥಳಿಸಿದ ವಿಡಿಯೋ ಜಾಲತಾಣದಲ್ಲಿ ಹರಿದಾಡತೊಡಗಿದೆ. ಬ್ಯಾರೇಜ್ ತುಂಬಿದ ಹಿನ್ನೆಲೆ ಪರಿಶೀಲನೆ ತೆರಳಿದ ಇಂಡಿ ಎಇಇ ಆರ್.ಎಸ್. ಬಂಡಿ, ಧೂಳಖೇಡ ಪಿಡಿಒ ಲಾಲಸಾಬ ನದಾಫ್ ಹಾಗೂ ಮತ್ತಿತರ ಸಿಬ್ಬಂದಿಯನ್ನು ಮಹಾರಾಷ್ಟ್ರದ ಜನ ತಳ್ಳಾಡಿದ್ದಾರೆ. ಬಳಿಕ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆನ್ನಲಾಗಿದೆಯಾದರೂ ಬ್ಯಾರೇಜ್‌ನಿಂದ ನೀರು ಹರಿಸುವಲ್ಲಿ ಪದೇ ಪದೇ ಅಡೆತಡೆಯುಂಟು ಮಾಡುತ್ತಿರುವುದು ಮಾತ್ರ ನಿಂತಿಲ್ಲ.