ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಕಲೆ ಯಾರೊಬ್ಬರ ಸ್ವತ್ತಲ್ಲ. ನಮ್ಮ ನೌಕರರು ಅದ್ಭುತವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಜಾನಪದ ಕಲೆ ಅನೇಕ ಕೊಡುಗೆ ಕೊಟ್ಟಿದೆ. ಈ ಕಲೆಯನ್ನು ಉಳಿಸಲು ನಮ್ಮ ನೌಕರರು ಶ್ರಮಿಸಿದ್ದಾರೆ. ಕನ್ನಡ ವಿಚಾರದಲ್ಲಿ ನಮ್ಮ ಸಂಘ ನಿರಂತರವಾಗಿ ಬೆಂಬಲ ನೀಡುತ್ತಿದೆ ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಗೌಡ, ಗೌರವಾಧ್ಯಕ್ಷ ಬಸವರಾಜು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್, ಹಿರಿಯ ಪತ್ರಕರ್ತ ಚಂದ್ರಹಾಸ ಮತ್ತಿತರರಿದ್ದರು.