2025ರ ಸೀಸನ್‌ಗೆ ರೂಕಿಯಾಗಿ ಪ್ರವೇಶಿಸಿದ ಚಂದಾರಿಯಾ ಈ ಚಾಂಪಿಯನ್‌ಷಿಪ್ ಗೆದ್ದಿದ್ದು, ಇದು ಅವರ ಯುವ ವೃತ್ತಿಜೀವನದ ಮೊದಲ ಪ್ರಮುಖ ಕಿರೀಟವಾಗಿದೆ. ಅಂತಿಮ ಐದನೇ ಸುತ್ತಿಗೆ ಮುನ್ನ ಚಂದಾರಿಯಾ ಪ್ರತಿನಿಧಿಸಿದ ಚೆನ್ನೈ ಟರ್ಬೊ ರೈಡರ್ಸ್ ತಂಡ 24 ಅಂಕಗಳ ಮುನ್ನಡೆ ಹೊಂದಿತ್ತು. ಅಂತಿಮ ಸುತ್ತಿನ ಮೊದಲ ರೇಸ್‌ನಲ್ಲಿ ಪೋಲ್ ಸ್ಥಾನದಿಂದ ಆರಂಭಿಸಿದ ಚಂದಾರಿಯಾ, 23 ಲ್ಯಾಪ್‌ಗಳನ್ನು 26 ನಿಮಿಷ 23.059 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ಗೆಲುವು ಸಾಧಿಸಿದರು.