ಅಬ್ಬರ ಇಲ್ಲದ ಹಬ್ಬದ ಖರೀದಿ; ಹೂವು-ಹಣ್ಣಿಗೆ ಡಿಮ್ಯಾಂಡ್, ತರಕಾರಿ ಬೆಲೆ ಕುಸಿತ

ಕೆ.ಆರ್. ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರದಲ್ಲಿ ನಿರತರಾಗಿರುವ ವ್ಯಾಪಾರಿಗಳು
ಕೆ.ಆರ್. ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರದಲ್ಲಿ ನಿರತರಾಗಿರುವ ವ್ಯಾಪಾರಿಗಳು
Published on

ಪ್ರಮುಖ ಮುಖ್ಯಾಂಶಗಳು

  • ಅಬ್ಬರ ಇಲ್ಲದ ಹಬ್ಬದ ಖರೀದಿ; ಹೂವು-ಹಣ್ಣಿಗೆ ಡಿಮ್ಯಾಂಡ್
  • ಮಾರುಕಟ್ಟೆಯ ಮೇಲೆ ಯುದ್ಧದ ದುಷ್ಪರಿಣಾಮ; ತರಕಾರಿ ಬೆಲೆ ಕುಸಿತ
  • ರಂಜಾನ್ ಶಾಪಿಂಗ್‌ಗೆ ಅಡ್ಡಿಯಾದ ಮಳೆರಾಯ

ಬೆಂಗಳೂರು:ಯುಗಾದಿ ಹಬ್ಬವನ್ನುಬಡವ ಶ್ರೀಮಂತ ಎಂಬ ಭೇದವಿಲ್ಲದೆಎಲ್ಲರೂ ಆಚರಿಸುತ್ತಾರೆ.ಹೊಸಬಟ್ಟೆ,ದಿನಸಿ,ತರಕಾರಿ,ಹೂವು,ಹಣ್ಣು ಹೀಗೆಎಲ್ಲ ರೀತಿಯ ಖರೀದಿಯಲ್ಲಿ ಗ್ರಾಹಕರುತಲ್ಲೀನರಾದ ದೃಶ್ಯ ನಗರದೆಲ್ಲೆಡೆಸಾಮಾನ್ಯವಾಗಿತ್ತು.ಆದರೆ ಕಳೆದವರ್ಷಗಳಿಗೆ ಹೋಲಿಸಿದರೆ ವ್ಯಾಪಾರಸ್ವಲ್ಪ ಮಂಕಾಗಿದೆ ಎಂಬುದುವ್ಯಾಪಾರಿಗಳ ಅಭಿಪ್ರಾಯ.

ಯಾವುದೇಹಬ್ಬ ಬಂದಾಗಲು ಬೆಂಗಳೂರಿನಕೆ.ಆರ್.ಮಾರುಕಟ್ಟೆ ಗ್ರಾಹಕರಿಂದ ತುಂಬಿರುತ್ತದೆ.ಬೆಳಗಿನ ಜಾವಹೂವಿನ ಮಾರುಕಟ್ಟೆಯಲ್ಲಿನಿತ್ಯಕ್ಕಿಂತ ಬಾರಿ ಹೆಚ್ಚಿನಗ್ರಾಹಕರೇನು ಕಂಡು ಬರಲಿಲ್ಲ.ನಂತರ ದಿನಪೂರ್ತಿಖರೀದಿಗಾಗಿ ಗ್ರಾಹಕರ ಸಂಖ್ಯೆದಿನನಿತ್ಯಕ್ಕಿಂತ ಹೆಚ್ಚಾಗಿಕಂಡುಬಂದರೂ,ಇತರೆ ಹಬ್ಬದಸಂದರ್ಭದಲ್ಲಿ ಸೇರುತ್ತಿದ್ದಜನಜಂಗುಳಿ ಇರಲಿಲ್ಲ.

ಇನ್ನುಳಿದಂತೆಯಶವಂತಪುರ ಮಾರುಕಟ್ಟೆಯಲ್ಲೂಬೆಳಗ್ಗೆ ್ರೆಶ್ ಹೂವು ಖರೀದಿಗೆಗ್ರಾಹಕರು ಮುಗಿಬಿದ್ದಿದ್ದರು.ಆದರೆ ಬಿಸಿಲುಹೆಚ್ಚಾಗುತ್ತಲೇ ಗ್ರಾಹಕರ ಸಂಖ್ಯೆಇಳಿಮುಖವಾಗಿತ್ತು.ಆದರೆ ಸಂಜೆಯನಂತರ ಮತ್ತೆ ಗ್ರಾಹಕರು ಹೂವು,ಹಣ್ಣು,ತರಕಾರಿ ಖರೀದಿಗೆಮಾರುಕಟ್ಟೆಗಳತ್ತ ಆಗಮಿಸುತ್ತಿದ್ದದೃಶ್ಯ ಸಾಮಾನ್ಯವಾಗಿತ್ತು.

ಹಬ್ಬದಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಗ್ರಾಹಕರು ಕಂಡು ಬರುವುದುಗಾಂಧಿಬಜಾರ್,ಮಲ್ಲೇಶ್ವರಮತ್ತು ಜಯನಗರ ಮಾರುಕಟ್ಟೆಯಲ್ಲಿ.ಗಾಂಧಿ ಬಜಾರ್‌ನಲ್ಲಿಹೂವಿನ ಮಾರಾಟ ಜೋರಾಗಿ ಕಂಡುಬಂತು. ಜೊತೆಗೆಗಾಂಧಿಬಜಾರ್‌ನಲ್ಲಿ ಪೂಜಾಸಾಮಾಗ್ರಿಗಳ ಅಂಗಡಿಗಳುಹೆಚ್ಚಾಗಿರುವುದರಿಂದ ಹಬ್ಬಕ್ಕೆಬೇಕಾದ ವಸ್ತುಗಳನ್ನು ಖರೀದಿಸಲುಗೃಹಿಣಿಯರು ಹೆಚ್ಚಾಗಿ ಆಗಮಿಸಿದ್ದರು.ಜಯನಗರ ಮತ್ತುಮಲ್ಲೇಶ್ವರದಲ್ಲಿ ಹಬ್ಬಕ್ಕೆಬೇಕಾದ ಹೊಸಬಟ್ಟೆ ಮತ್ತು ಆಭರಣಗಳಅಂಗಡಿಗಳಲ್ಲಿ ವ್ಯಾಪಾರ ಜೋರಾಗಿತ್ತು. ಬೀದಿ ಬದಿವ್ಯಾಪಾರಿಗಳು ಹಾಗೂ ಶೋರೂಮ್‌ಗಳಲ್ಲಿಗ್ರಾಹಕರು ಬಟ್ಟೆ ಖರೀದಿಯಲ್ಲಿತೊಡಗಿದ್ದರೆ;ಕಳೆದ ಕೆಲ ದಿನಗಳಿಂದಬೆಳ್ಳಿ, ಬಂಗಾರದಬೆಲೆ ಸ್ವಲ್ಪ ಇಳಿಕೆಯಾಗಿರುವುದರಿಂದಜ್ಯುವೆಲ್ಲರಿ ಶಾಪ್‌ಗಳಲ್ಲೂಖರೀದಿಯಲ್ಲಿ ಸ್ವಲ್ಪಮಟ್ಟಿನಏರಿಕೆ ಕಂಡು ಬಂದಿತ್ತು.ಆದರೆ ಹಬ್ಬದಅಗತ್ಯವನ್ನು ಹೊರತು ಪಡಿಸಿಹೆಚ್ಚಿನ ಬೆಳ್ಳಿ-ಬಂಗಾರಖರೀದಿಯಲ್ಲಿ ಜನರು ಮುಂದಾಗುತ್ತಿಲ್ಲಎಂಬುದು ಜ್ಯುವೆಲ್ಲರಿ ವ್ಯಾಪಾರಿಗಳಅಭಿಪ್ರಾಯ. ಇನ್ನುಳಿದಂತೆಚಿಕ್ಕಪೇಟೆಯಲ್ಲಿ ಜವಳಿ ವ್ಯಾಪಾರಜೋರಾಗಿದ್ದು,ದಿನಸಿ ಅಂಗಡಿಗಳಲ್ಲಿಗ್ರಾಹಕರ ವ್ಯಾಪಾರ ಎಂದಿಗಿಂತಹೆಚ್ಚಾಗಿತ್ತು.

ಮಾರುಕಟ್ಟೆಯಮೇಲೆ ಯುದ್ಧದ ಪರಿಣಾಮ

ಈ ಬಾರಿಜಾಗತಿಕ ಯುದ್ಧದ ಪರಿಣಾಮ ಮಾರುಕಟ್ಟೆಯಮೇಲೂ ಬೀರಿದೆ.ಕಳೆದ ವರ್ಷಗಳಿಗೆಹೋಲಿಸಿದರೆ ಹಬ್ಬದ ಬೇಡಿಕೆ ಕಡಿಮೆಆಗಿದೆ ಎಂಬುದು ವ್ಯಾಪಾರಿಗಳುಮಾತು. ಹೂವಿನಬೆಲೆ ದಿನನಿತ್ಯಕ್ಕಿಂತ ಸ್ವಲ್ಪಹೆಚ್ಚಾಗಿದ್ದು,ಹಣ್ಣುಗಳ ಬೆಲೆಸ್ಥಿರವಾಗಿದೆ.ಆದರೆ ತರಕಾರಿಬೆಲೆಯಲ್ಲಿ ಕುಸಿತ ಕಂಡು ಬಂದಿದೆ.ಮಧ್ಯಪ್ರಾಚ್ಯದೇಶಗಳ ನಡುವಿನ ಯುದ್ಧದಿಂದದೇಶದಲ್ಲಿ ಗ್ಯಾಸ್ ಸಿಲಿಂಡರ್‌ಗಳಕೊರತೆ ಉಂಟಾಗಿರುವುದರಿಂದ ಹಲವುಹೋಟೆಲ್‌ಗಳು ಮುಚ್ಚಿದ್ದು,ತರಕಾರಿ ಬೇಡಿಕೆಕುಸಿತವಾಗಿದೆ.ಉದ್ಯೋಗಕ್ಕಾಗಿಬೆಂಗಳೂರಿನಲ್ಲಿ ನೆಲೆಸಿರುವಲಕ್ಷಾಂತರ ಜನ ಹಬ್ಬಕ್ಕಾಗಿ ತಮ್ಮಸ್ವಂತ ಊರುಗಳಿಗೆ ತೆರಳಿರುವುದರಿಂದನಗರದಲ್ಲಿ ತರಕಾರಿ ಬೇಡಿಕೆಕುಸಿಯಲು ಮತ್ತೊಂದು ಕಾರಣ.

ರಂಜಾನ್ಶಾಪಿಂಗ್‌ಗೆ ಮಳೆ ಅಡ್ಡಿ

ಮುಸ್ಲಿಂಬಾಂಧವರ ಪವಿತ್ರ ರಂಜಾನ ಹಬ್ಬದಶಾಪಿಂಗ್‌ಗೆ ವರುಣ ಅಡ್ಡಿಯುಂಟುಮಾಡಿದ್ದಾನೆ.ಸಾಮಾನ್ಯವಾಗಿರಂಜಾನ್ ಹಬ್ಬಕ್ಕೆ ಮುಸ್ಲಿಂರುಬಟ್ಟೆ, ಚಪ್ಪಲಿ,ಬ್ಯಾಗು ಹೀಗೆಬಳಕೆಗೆ ಬೇಕಾದ ಎಲ್ಲ ವಸ್ತುಗಳನ್ನುಹೊಸದಾಗಿ ಖರೀದಿಸಿ ಬಳಸುತ್ತಾರೆ. ಶಿವಾಜಿನಗರ,ಹೆಣ್ಣೂರು,ರಸೇಲ್ಮಾರ್ಕೆಟ್‌ಮತ್ತಿತರ ನಿಗದಿತಸ್ಥಳಗಳಲ್ಲಿ ರಂಜಾನ್ ಹಬ್ಬದಶಾಪಿಂಗ್ ಭರಾಟೆ ಜೋರಾಗಿರುತ್ತದೆ.ಸಾಮಾನ್ಯವಾಗಿರಂಜಾನ್ ಶಾಪಿಂಗ್ ಸಂಜೆ ವೇಳೆಯಲ್ಲಿಮಾಡಲಾಗುತ್ತದೆ.ಕಳೆದೆರಡುದಿನದಿಂದ ಸಂಜೆ ವೇಳೆಯಲ್ಲಿಬೆಂಗಳೂರಿನಲ್ಲಿ ಮಳೆ ಸುರಿಯುತ್ತಿರುವುದರಿಂದಗ್ರಾಹಕರಿಗೆ ಅಡಚಣೆ ಉಂಟಾಗಿತ್ತು.ಶನಿವಾರ ರಂಜಾನ್ಹಬ್ಬವಿದ್ದು,ಗುರುವಾರ ಮತ್ತುಶುಕ್ರವಾರ ಶಾಪಿಂಗ್ ಮುಂದುವರೆಯಲಿದೆ

ಬೇರೆಲ್ಲಾ ವ್ಯಾಪಾರಕ್ಕೂ, ಚಿನ್ನ, ಬೆಳ್ಳಿ ವ್ಯಾಪಾರಕ್ಕೂ ಬಹಳ ವ್ಯತ್ಯಾಸವಿದೆ. ಬೆಲೆ ಏರಿಕೆಯಾಗುತ್ತಿದ್ದಾಗ ಇನ್ನೂ ಹೆಚ್ಚಾಗಬಹುದೆಂಬ ಆತಂಕದಿಂದ ಖರೀದಿಗೆ ಮುಗಿ ಬೀಳುವ ಗ್ರಾಹಕರು ಬೆಲೆ ಇಳಿದಾಗ ಇನ್ನೂ ಇಳಿಯಬಹುದೆಂದು ಕಾಯುವುದು ಗ್ರಾಹಕರ ಮೈಂಡ್ ಸೆಟ್. ಹಾಗಾಗಿ ವ್ಯಾಪಾರದಲ್ಲಿ ಗಮನಾರ್ಹ ಚೇತರಿಕೆ ಇಲ್ಲ.

ಹೂವು, ಹಣ್ಣು, ತರಕಾರಿ ಕೆಜಿ ಒಂದರ ಬೆಲೆ 

 ಮಲ್ಲಿಗೆ : 800 ರಿಂದ 400ಗುಲಾಬಿ : 160 ರಿಂದ 120ಸೇವಂತಿಗೆ : 200 ರಿಂದ 120ಕನಕಾಂಬರ : 1000 ದಿಂದ 600ಕಣಗಿಲೆ : 200 ರಿಂದ 150ಸುಗಂಧರಾಜ : 200 ರಿಂದ 120ಸೇಬು : 250ಮೂಸಂಬಿ : 120ದ್ರಾಕ್ಷಿ : 120ಬಾಳೆಹಣ್ಣು : 100ಕ್ಯಾರೆಟ್ : 30ಬೀನ್ಸ್ : 40ನುಗ್ಗೆಕಾಯಿ : 20ಟೊಮ್ಯಾಟೋ : 30ಬದನೆಕಾಯಿ : 20

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net