ಅರಕಲಗೂಡಲ್ಲೂ ಹಬ್ಬದ ಸಂಭ್ರಮ

ಕೊಣನೂರಿನ ಕೆರೆಕೋಡಿ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್‌ಗೌಡ ಪಾಲ್ಗೊಂಡಿದ್ದರು.
ಕೊಣನೂರಿನ ಕೆರೆಕೋಡಿ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್‌ಗೌಡ ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಕ್ರೀದ್ ಹಬ್ಬ
  • ಮುಸ್ಲಿಮರ ಕೇರಿಗಳಲ್ಲಿ ದಿನವಿಡೀ ಹಬ್ಬದ ಸಂಭ್ರಮ
ಅರಕಲಗೂಡು: ಪಟ್ಟಣದಲ್ಲಿ ಮುಸ್ಲಿಮರು ಗುರುವಾರ ಬಕ್ರೀದ್ ಹಬ್ಬವನ್ನು ಭಕ್ತಿ-ಸಡಗರದಿಂದ ಆಚರಿಸಿದರು.
ಮುಸ್ಲಿಮರ ಕೇರಿಗಳಲ್ಲಿ ದಿನವಿಡೀ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಹೊಸಬಟ್ಟೆ ತೊಟ್ಟು ಅಂಚೆ ಕಚೇರಿ ಹಿಂಭಾಗದ ಈದ್ಗಾ ಮೈದಾನಕ್ಕೆ ತೆರಳಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ತಾಲೂಕಿನ ಕೊಣನೂರು, ಹೊಳಗೋಡು, ಎಬಿಎಂ ಹಳ್ಳಿ, ಹಂಡ್ರಂಗಿ, ಸಿದ್ದಾಪುರ, ಕಟ್ಟೇಪುರ, ರುದ್ರಪಟ್ಟಣ, ಮಧುರನಹಳ್ಳಿ, ಬಸವಾಪಟ್ಟಣ, ರಾಮನಾಥಪುರದಲ್ಲೂ ಮುಸ್ಲಿಮರು ಬ್ರಕೀದ್ ಪ್ರಾರ್ಥನೆ ಸಲ್ಲಿಸಿ ಹಬ್ಬದ ಸಂಭ್ರಮ ಆಚರಿಸಿದರು.
ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್‌ಗೌಡ ಕೊಣನೂರಿನ ಕೆರೆಕೋಡಿ ಈದ್ಗಾ ಮೈದಾನದಲ್ಲಿ ಬ್ರಕೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net