

ನಡೆದಿದ್ದೇನು?
ಮೊದಲ ದಿನದ ತರಬೇತಿ ಮುಗಿಸಿಕೊಂಡು ಸಂಜೆ 6.30ರ ಆಸುಪಾಸಿನಲ್ಲಿ ರೇಖಾ ಕೆಲ ಸಹೊದ್ಯೋಗಿಗಳ ಜತೆ ಈಜುಕೊಳಕ್ಕೆ ಇಳಿದಿದ್ದಾರೆ. ಕೆಲ ಕಾಲ ಈಜಾಡಿದ ರೇಖಾ ನಂತರ ಅಸ್ವಸ್ಥಗಳಾಗಿದ್ದು, ಜತೆಯಲ್ಲಿದ್ದವರು ಆಕೆಯನ್ನು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಅಷ್ಟರಲ್ಲಿ ರೇಖಾ ಮೃತಪಟ್ಟಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ.ನಿಯಮದಂತೆ ಸಂಜೆ 6 ಗಂಟೆ ನಂತರ ಈಜುಕೊಳದಲ್ಲಿ ಈಜಾಡುವುದು ನಿಷಿದ್ಧ. ಆದರೆ, ರೆಸಾರ್ಟ್ನವರು ಈಜಾಡಲು ಅವಕಾಶ ಕೊಟ್ಟಿದ್ದಾರಲ್ಲದೆ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಇದರಿಂದಲೆ ರೇಖಾ ಮೃತಪಟ್ಟಿದ್ದಾರೆಂದು ಕುಟುಂಬದವರು ದೂರಿದ್ದಾರೆ.
ಕುಟುಂಬದವರ ಆಕ್ರೋಶ
ವಿಷಯ ತಿಳಿದು ಆಸ್ಪತ್ರೆ ಮುಂದೆ ಜಮಾಯಿಸಿದ ಮೃತಳ ಕುಟುಂಬದವರು, ಕುಂದಲಗುರ್ಕಿ ಗ್ರಾಮಸ್ಥರು ರೆಸಾರ್ಟ್ನ ಮಾಲೀಕರ ವಿರುದ್ದ ಕಿಡಿ ಕಾರಿದರು. ರೆಸಾರ್ಟ್ ಮಾಲೀಕರು ಸ್ಥಳಕ್ಕೆ ಆಗಮಿಸಿ, ನಡೆದ ಘಟನೆ ಬಗ್ಗೆ ವಿವರಿಸಬೇಕು ಎಂದು ಶವಪರೀಕ್ಷೆ ನಡೆಸದಂತೆ ತಡೆ ಹಾಕಿದರು.ಸ್ಥಳದಲ್ಲಿದ್ದ ಎಫ್ಇಎಸ್ ಸಂಸ್ಥೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆದ ಘಟನೆಯನ್ನು ವಿವರಿಸಿದರು. ಪೊಲೀಸರು ರೇಖಾಳ ಕುಟುಂಬದವರನ್ನು ಮತ್ತು ಕುಂದಲಗುರ್ಕಿ ಗ್ರಾಮಸ್ಥರನ್ನು ಸಮಾಧಾನಪಡಿಸಿ, ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಮೃತ ರೇಖಾಳ ಪತಿ ರಾಜು ರೆಸಾರ್ಟ್ಲ್ಲಿ ಈಜುಕೊಳದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಕಾವಲುಗಾರರನ್ನೂ ನೇಮಿಸಿಲ್ಲ.ಪತ್ನಿ ಸಾವಿಗೆ ರೆಸಾರ್ಟ್ನ ಮಾಲೀಕರೇ ಕಾರಣವಾಗಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.