ಮಗನನ್ನು ಬಿಡಿಸಲು ಹೋದ ತಂದೆ ಹತ್ಯೆ

ಮಾಬುಸಾಬ್
ಮಾಬುಸಾಬ್
Published on

ಪ್ರಮುಖ ಮುಖ್ಯಾಂಶಗಳು

  • ಜಗಳದಿಂದ ತನ್ನ ಮಗನನ್ನು ಬಿಡಿಸಲು ಹೋದ ತಂದೆಯ ಹತ್ಯೆ
ಹೊಸಪೇಟೆ: ಜಗಳದಿಂದ ತನ್ನ ಮಗನನ್ನು ಬಿಡಿಸಲು ಹೋದ ತಂದೆಯೇ ಹತ್ಯೆಗೀಡಾಗಿದ್ದಾನೆ. ಸಮೀಪದ ಕಾರಿಗನೂರಿನಲ್ಲಿ ಗುರುವಾರ ಸಂಭವಿಸಿದ ಘಟನೆಯಲ್ಲಿ ಮಾಬುಸಾಬ್ (50) ಮೃತ.
ಈ ಸಂಬಂಧ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಮಾಬುಸಾಬ್ ಅವರ ಪುತ್ರ ಮೌಲಾಹುಸೇನ್ ಮೇಲೆ ಯುವಕರ ಗುಂಪು ಜಗಳ ತೆಗೆದಿದ್ದು, ಈ ವೇಳೆ ಮಗನನ್ನು ರಕ್ಷಿಸಲು ಮುಂದಾದ ಮಾಬುಸಾಬ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.
ಭಂಗಿ ಹನುಮಂತ, ಚರಣ ಮತ್ತು ಹುಲಿಗೆಮ್ಮ ಎಂಬುವವರನ್ನು ವಶಕ್ಕೆ ಪಡೆಯಲಾಗಿದ್ದು, ರಾಘವೇಂದ್ರ, ದರ್ಶನ, ಚಂದ್ರ ಮತ್ತು ಗುರಯ್ಯ ಅವರಿಗಾಗಿ ತೀವ್ರ ಶೋಧ ನಡೆದಿದೆ.
ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಗಸ್ತು ಹೆಚ್ಚಿಸಲಾಗಿದೆ. ಐಜಿಪಿ ವರ್ತಿಕಾ ಕಟಿಯಾರ್, ಎಸ್ಪಿ ಎಸ್. ಜಾಹ್ನವಿ, ಎಎಸ್ಪಿ ಮಂಜುನಾಥ ಹಾಗೂ ಡಿವೈಎಸ್ಪಿ ಡಾ. ಟಿ. ಮಂಜುನಾಥ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net