ಎಸ್​ಟಿಪಿ ಟಕ ಸ್ಥಾಪನೆಗಾಗಿ 15ಕ್ಕೆ ಉಪವಾಸ ಸತ್ಯಾಗ್ರಹ / DODABALLAPUR

ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಅರ್ಕಾವತಿ ನದಿ ಪಾತ್ರ ಸಂರಕ್ಷಣೆ ಹೋರಾಟ ಸಮಿತಿ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  ಸಮಿತಿ ಮುಖಂಡರಾದ ಕಾಳೇಗೌಡ, ಸತೀಶ್​, ವಸಂತ್​, ಅಂಜನ್​ ಮೂರ್ತಿ, ರಾಮಕೃಷ್ಣ, ಅಂಜಿನಪ್ಪ ಸೇರಿದಂತೆ ಹಲವು ರೈತ ಮುಖಂಡರು ಇದ್ದರು.
ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಅರ್ಕಾವತಿ ನದಿ ಪಾತ್ರ ಸಂರಕ್ಷಣೆ ಹೋರಾಟ ಸಮಿತಿ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಮಿತಿ ಮುಖಂಡರಾದ ಕಾಳೇಗೌಡ, ಸತೀಶ್​, ವಸಂತ್​, ಅಂಜನ್​ ಮೂರ್ತಿ, ರಾಮಕೃಷ್ಣ, ಅಂಜಿನಪ್ಪ ಸೇರಿದಂತೆ ಹಲವು ರೈತ ಮುಖಂಡರು ಇದ್ದರು.
Published on

ದೊಡ್ಡಬಳ್ಳಾಪುರ :

ಕೊಳಚೆ ನೀರನ್ನು ಶುದ್ಧೀಕರಿಸಲು ಎಸ್​ಟಿಪಿ ಘಟಕ ಸ್ಥಾಪಿಸಬೇಕು, ಇಲ್ಲದಿದ್ದರೆಹೋರಾಟ ನಿರಂತರವಾಗಿರುತ್ತದೆ. ಸಾಂಕೇತಿಕವಾಗಿ ಆ.15ರಂದು ನಗರದ ಗಾಂಧಿ ಪ್ರತಿಮೆ ಬಳಿ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡಲು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹೋರಾಟ ಸಮಿತಿ ತೀಮಾರ್ನಿಸಿದೆ ಎಂದು ವೇದಿಕೆಯ ಮುಖಂಡ ಸತೀಶ್​ ತಿಳಿಸಿದರು.

ದೊಡ್ಡತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಈ ಬಗ್ಗೆ ಕಳೆದ ನಾಲ್ಕು ವರ್ಷಗಳಿಂದ ನಿರಂತರ ಹೋರಾಟ ಮುಂದುವರಿದಿದೆ. ಆದರೆ, ಸರ್ಕಾರ ಈವರೆಗೂ ಯಾವುದೇ ಅಭಿವೃದ್ಧಿಕಾರ್ಯ ಕೈಗೊಂಡಿಲ್ಲ. ಕಳೆದ ಬಾರಿ ಹೋರಾಟ ಮಾಡಿದಾಗ ಸಿಎಂ ಕಚೇರಿಯಲ್ಲಿಸಭೆ ನಡೆಸಿ, ಚಳವಳಿ ಕೈಬಿಡಿ, ಎರಡು ದಿನಗಳಲ್ಲಿ ನಿಮ್ಮ ಸಮಸ್ಯೆ ಬಗ್ಗೆ ಹರಿಸುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದರು. ಆರು ತಿಂಗಳು ಕಳೆದರೂ ಯಾವುದೇ ಪ್ರಗತಿ ಕೈಗೊಂಡಿಲ್ಲ. ಹೀಗಾಗಿ ನಮ್ಮ ಹೋರಾಟದ ಮುಂದಿನ ಭಾಗವಾಗಿ ಆ.15ರಂದು ಸಾಂಕೇತಿಕ ಉಪವಾಸ ಸತ್ಯಗ್ರಹ ಮಾಡಲು ಮುಂದಾಗಿದ್ದೇವೆ ಎಂದು ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೇದಿಕೆ ಮುಖಂಡ ವಸಂತ್​ ಕುಮಾರ್​ ಮಾತನಾಡಿ, ನಮ್ಮ ಹೋರಾಟ ನಿತ್ಯ ನಿರಂತರವಾಗಿರುತ್ತದೆ. ಮುಖ್ಯವಾಗಿ ನಗರದಿಂದ ನಮ್ಮ ಊರಿನ ಕೆರೆಗೆ ಹರಿಯುತ್ತಿರುವ ಕೊಳಚೆ ನೀರನ್ನು ಶುದ್ಧೀಕರಿಸಲು ಎಸ್​ಟಿಪಿ ಘಟಕ ಸ್ಥಾಪಿಸಲು ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಈವರೆಗೂ ಕ್ರಮ ವಹಿಸಿಲ್ಲ ಎಂದರು.

ನಮ್ಮ ಹೋರಾಟ ಜೀವಂತವಾಗಿದೆ ಎಂಬುದನ್ನು ನೆನಪಿಸಲು ಆ.15ರಂದು ನಗರದ ಗಾಂಧಿ ವೃತ್ತದಲ್ಲಿ ಗಾಂಧಿ ಪ್ರತಿಮೆ ಮುಂದೆ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಮಾಡಲು ತೀಮಾರ್ನಿಸಿದ್ದು, ಈ ಮೂಲಕ ಅಧಿಕಾರಿಗಳಿಗೆ ಎಚ್ಚರಿಸುವ ಕಾರ್ಯ ಮಾಡಲಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net