ಕೆರೆ ಹೂಳು ತೆಗೆಯುವ ರೈತರಿಗೆ ತೊಂದರೆ ಸಲ್ಲ

Farmers who remove lake silt should not be disturbed.
Farmers who remove lake silt should not be disturbed.
Published on
ಹುಲಿಯೂರುದುರ್ಗ: ಕೆರೆಯಲ್ಲಿ ತುಂಬಿಕೊಂಡಿರುವ ಹೂಳು ಮಣ್ಣು ಸಾಗಣೆ ಮಾಡುವ ರೈತರ ವಿರುದ್ಧ ದೂರು ದಾಖಲಿಸುವ ಕ್ರಮ ಕೈಬಿಡಬೇಕು ಎಂದು ಒತ್ತಾಯಿಸಿ ಕುಣಿಗಲ್ ತಾಲೂಕು ಕಚೇರಿ ಮುಂದೆ ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಟಿ.ಎಂ.ವೃತ್ತದಲ್ಲಿ ನೂರಾರು ರೈತರು ಸಮಾವೇಶಗೊಂಡು ಕಂದಾಯ ಇಲಾಖೆ ಅಧಿಕಾರಿಗಳ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನಂತರ ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿದರು.
ರೈತಸಂ ಹಸಿರು ಸೇನೆ ಜಿಲ್ಲಾಧ್ಯಕ್ಷ ಯೋಗೇಶ್ ಕರೀಗೌಡ ವಾತನಾಡಿ,ತಾಲೂಕಿನಲ್ಲಿ ರೈತರ ಜಮೀನುಗಳಿಗೆ ಕೆರೆಕಟ್ಟೆಗಳಿಂದ ಅಡಿಕೆ, ತೆಂಗು, ಬಾಳೆ ತೋಟಗಳಿಗೆ ಬೇಸಿಗೆಯಲ್ಲಿ ಕೆರೆಯಿಂದ ತಮ್ಮ ಜಮೀನುಗಳಿಗೆ ಮಣ್ಣು ತುಂಬಿಕೊಂಡು ಸಾಗಿಸುತ್ತಿದ್ದಾರೆ. ಸರ್ಕಾರ ಮಾಡುವ ಕೆಲಸವನ್ನು ರೈತರು ಮಾಡುತ್ತಿದ್ದಾರೆ. ಕಂದಾಯ ಹಾಗೂ ಸಣ್ಣ ನೀರಾವರಿ ಇಲಾಖೆಗಳ ಅಧಿಕಾರಿಗಳು ಮಣ್ಣನ್ನು ತೆಗೆಯದಂತೆ ಅಡಚಣೆ ಉಂಟು ವಾಡಿ, ಜೆಸಿಬಿ ಹಾಗೂ ಟ್ರ್ಯಾಕ್ಟರ್ ಮೂಲಕ ರೈತರು ಮಣ್ಣು ಸಾಗಾಣಿಕೆ ವಾಡಿಕೊಳ್ಳುತ್ತಿರುವುದನ್ನು ಸಹಿಸದ ಅಧಿಕಾರಿಗಳು ರೈತರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಈ ಕ್ರಮವನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.
ರೈತರ ಹೆಸರಿನಲ್ಲಿ ಮಣ್ಣು ಸಾಗಾಣಿಕೆ ಮಾಡುವವರು, ಜತೆಗೆ ರೈತರ ಹೆಸರೇಳಿ ಜಮೀನುಗಳಲ್ಲಿ ಸಂಗ್ರಹ ವಾಡುತ್ತಿದ್ದರೆ ಅಂತಹವರ ಮೇಲೆ ಕ್ರಮ ತೆಗೆದುಕೊಳ್ಳಲಿ. ಕಮರ್ಷಿಯಲ್ ಲ್ಯಾಂಡ್ ಭೂಮಿಗೆ ಸಾಗಾಣಿಕೆ ವಾಡುತ್ತಿದ್ದರೆ ಅಂತಹವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವುದನ್ನು ಬಿಟ್ಟು ರೈತರ ಮೇಲೇಕೆ ತಮ್ಮಗಳ ಕಣ್ಣು ಎಂದು ಪ್ರಶ್ನಿಸಿದರು.
ಕೆರೆಗಳಲ್ಲಿ ಹೂಳು ತುಂಬಿರುವುದನ್ನು ತೆಗೆದರೆ ರೈತರಿಗೆ ಅನುಕೂಲವಾಗುವುದರ ಜತೆಗೆ ಮಳೆ ನೀರು ಹೆಚ್ಚು ಶೇಖರಣೆಯಾಗುತ್ತದೆ. ಇದರಿಂದ ರೈತರ ಬೆಳೆಗಳಿಗೆ ಅನುಕೂಲವಾಗುತ್ತದೆ, ಕೆರೆಯಲ್ಲಿ ಬೆಳೆದಿರುವ ಗಿಡಗಳನ್ನು ತೆಗೆಯಲಾಗುತ್ತದೆ. ಕೆರೆಯ ಅಂದ ಹೆಚ್ಚಲಿದೆ. ಅಂತರ್ಜಲ ವೃದ್ಧಿಯಾಗುತ್ತದೆ. ಹಾಗಾಗಿ ರೈತರ ವಿರುದ್ಧ ಯಾವುದೇ ರೀತಿಯ ಪ್ರಕರಣ ದಾಖಲಿಸದೇ ಮಣ್ಣು ಸಾಗಿಸಲು ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಮುಂದೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಕರಿಯ ನಾಯಕ್ ಮಾತನಾಡಿ, ಈ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿ ರೈತರಿಗೆ ಯಾವುದೇ ವಿಧವಾದ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ನೂರಾರು ರೈತ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ನವೀನ್ ಗೌಡ ಬಂದೋಬಸ್ ಕೈಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net