ಮಳೆಗಾಗಿ ಕಾದು ಕುಳಿತ ಕೃಷಿಕರು Rain

ಹುಲಿಯೂರುದುರ್ಗ rain ವ್ಯಾಪ್ತಿಯ ಡಿ.ಹೊಸಹಳ್ಳಿಯಲ್ಲಿ ರಾಗಿ ಬಿತ್ತನೆಗಾಗಿ ಭೂಮಿ ಹಸನುಗೊಳಿಸಿರುವುದು.
ಹುಲಿಯೂರುದುರ್ಗ rain ವ್ಯಾಪ್ತಿಯ ಡಿ.ಹೊಸಹಳ್ಳಿಯಲ್ಲಿ ರಾಗಿ ಬಿತ್ತನೆಗಾಗಿ ಭೂಮಿ ಹಸನುಗೊಳಿಸಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ವರುಣ ಕೃಪೆ ತೋರದಿದ್ದರೆ ರಾಗಿ ಬಿತ್ತನೆಗೆ ಹಿನ್ನಡೆ
  • ಆಗಸದತ್ತ ಮುಖ ಮಾಡಿದ ಭೂಮಿ ಹಸನು ಮಾಡಿಕೊಂಡ ರೈತರು
ಹುಲಿಯೂರುದುರ್ಗ: ಕುಣಿಗಲ್​ ತಾಲೂಕಿನಾದ್ಯಂತ ರಾಗಿ rain ಬಿತ್ತನೆಗಾಗಿ ಭೂಮಿ ಹಸನು ಮಾಡಿ, ಬಿತ್ತನೆ ಬೀಜ, ಗೊಬ್ಬರ ಸಂಗ್ರಹಿಸಿಟ್ಟುಕೊಂಡಿರುವ ರೈತರು ಮಳೆಗಾಗಿ ಆಕಾಶದತ್ತ ಮುಖ ಮಾಡಿದ್ದಾರೆ.
ಮಳೆ ಅಭಾವದಿಂದ ತಾಲೂಕಿನಲ್ಲಿ ರಾಗಿ ಬಿತ್ತನೆ ಪ್ರಾರಂಭವಾಗಿಲ್ಲ. ಜೂನ್​ ಮೊದಲನೆ ವಾರದಲ್ಲಿ ನಾಲ್ಕೆ$ದು ಬಾರಿ ಮಳೆಯಾಗಿರುವುದನ್ನು ಹೊರತುಪಡಿಸಿದರೆ ಈವರೆಗೂ ತಾಲೂಕಿನಲ್ಲಿ ಮಳೆಯಾಗಿಲ್ಲ. ಹಳ್ಳ ಕೊಳ್ಳದಲ್ಲಿದ್ದ ನೀರು ಬತ್ತಿಹೋಗಿದ್ದು, ಕೆರೆಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಕುಸಿಯುತ್ತಿದೆ.
ತಾಲೂಕಿನಲ್ಲಿ ಸುಮಾರು 35 ಸಾವಿರ ಹೆಕ್ಟೇರ್​ ಪ್ರದೇಶ ಒಣ ಭೂಮಿ ಇದ್ದು, ಬಹುತೇಕ ರೈತರು ಮಳೆ ಆಧಾರಿತ ಬೆಳೆಯನ್ನೇ ಅವಲಂಬಿಸಿದ್ದಾರೆ. ಪ್ರತಿ ವರ್ಷ ಮುಂಗಾರು ಪೂರ್ವದಲ್ಲಿ ದ್ವಿದಳ ಧಾನ್ಯಗಳಾದ ಹೆಸರು, ಉದ್ದು, ಅಲಸಂದೆ, ಕಡಲೆ, ಗೋವಿನ ಜೋಳ, ತೊಗರಿ ಬಿತ್ತನೆ ಮಾಡಲಾಗುತ್ತಿತ್ತು.
ಆದರೆ, ಈ ಬಾರಿ ಮಳೆ ಕೊರತೆಯಿಂದ ದ್ವಿದಳ ಧಾನ್ಯಗಳು ಬಿತ್ತನೆಯಾಗಿಲ್ಲ. ಇನ್ನು ಹಲವೆಡೆ ಶೇ.40 ಕೃಷಿ ಭೂಮಿಯನ್ನು ಉಳುಮೆ ಮಾಡಿಲ್ಲ. ಜೂನ್​ ಕೊನೆ ಅಥವಾ ಜುಲೈ ಮೊದಲ ವಾರದಿಂದ ಬಿತ್ತನೆ ಪ್ರಾರಂಭವಾಗಬೇಕಿತ್ತು. ಇದೀಗ ಬಿತ್ತನೆ ವಿಳಂಬವಾಗಿದ್ದು, ಭೂಮಿ ಹಸನು ಮಾಡಿರುವ ರೈತರಿಗೆ ಬರದ ಛಾಯೆ ಕಾಡುತ್ತಿದೆ.
ತಾಲೂಕಿನಲ್ಲಿ ಒಟ್ಟು 1.70 ಲಕ್ಷ ಜಾನುವಾರುಗಳಿದ್ದು, ಆಗಸ್ಟ್​ನ ಒಳಗಾಗಿ ಮಳೆಯಾಗದಿದ್ದರೆ ಜಾನುವಾರುಗಳಿಗೆ ಮೇವಿನ ಕೊರತೆಯಾಗಲಿದೆ. ಮಳೆಯಾಶ್ರಿತ ಭೂಮಿ ಹೊಂದಿರುವ ರೈತರಿಗೆ ಈಗಾಗಲೇ ಮೇವಿನ ಕೊರತೆ ಎದುರಾಗಿದ್ದು, ಜೂನ್​ನಲ್ಲಿ ಬಿದ್ದ ಮಳೆಗೆ ಚಿಗುರಿದ್ದ ಹುಲ್ಲು ಒಣಗಲಾರಂಭಿಸಿದೆ.
ಮಳೆಯಾಗದ ಕಾರಣ ಬಿತ್ತನೆ ವಿಳಂಬವಾಗಿದೆ. ಕೂಡಲೇ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಿ ತಾಲೂಕನ್ನು ಬರಪೀಡಿತ ಎಂದು ಘೋಷಿಸುವ ಜತೆಗೆ ಜಾನುವಾರುಗಳಿಗೆ ಮೇವಿನ ಬ್ಯಾಂಕ್​ ಸ್ಥಾಪಿಸಬೇಕು ಹಾಗೂ ರೈತರ ಆರ್ಥಿಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಪ್ಯಾಕೇಜ್​ ಘೋಷಿಸಬೇಕು.
> ಆನಂದ್​ ಪಟೇಲ್​ ಹುಲಿಕಟ್ಟೆ ಜಿಲ್ಲಾಧ್ಯಕ್ಷರು, ರಾಜ್ಯ ರೈತ ಸಂಘ ಹಸಿರು ಸೇನೆ.
ತಾಲೂಕಿನಲ್ಲಿ ವಾಡಿಕೆ ಮಳೆಗಿಂತ ಶೇ.20 ಮಳೆ ಕೊರತೆಯಾಗಿದೆ. ಜೂನ್​ನಲ್ಲಿ ಬಿದ್ದ ಮಳೆಗೆ ರೈತರು ಶೇ.60 ಭೂಮಿ ಸಿದ್ಧಗೊಳಿಸಿ ಬಿತ್ತನೆ ಬೀಜ ಸಂಗ್ರಹಿಸಿಟ್ಟುಕೊಂಡಿದ್ದು, ಮಳೆ ಬಿದ್ದರೆ ಬಿತ್ತನೆ ಮಾಡಲು ಕಾಯುತ್ತಿದ್ದಾರೆ. ತಡವಾಗಿ ಮಳೆಯಾದರೆ ಅಲ್ಪವಧಿ ರಾಗಿ, ಜೋಳ ಮತ್ತು ಹುರುಳಿ ಬಿತ್ತನೆಗೆ ಕೃಷಿ ಇಲಾಖೆಯಿಂದ ಸಲಹೆ ನೀಡಲಾಗುವುದು.
> ಆರ್​.ರಂಗನಾಥ್​,ಸಹಾಯಕ ಕೃಷಿ ನಿರ್ದೇಶಕ, ಕುಣಿಗಲ್​ ತಾಲೂಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net