ಅಧಿಕಾರಿಯೊಂದಿಗೆ ರೈತರ ಮಾತಿನ ಚಕಮುಕಿ

ಢವಳಗಿ ಗ್ರಾಮದಲ್ಲಿರುವ 33 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಅಸಮರ್ಪಕ ವಿದ್ಯುತ್ ನೀಡುವ ಪರಿಣಾಮವಾಗಿ ರೈತರು ಢವಳಗಿ ವಿದ್ಯುತ್ ಕೇಂದ್ರದಿಂದ ಹೊರಹೋಗುವ ಎಲ್ಲಾ ವಿದ್ಯುತ್ ಸಂಪರ್ಕವನ್ನು ಕೆಲವು ಗಂಟೆ ಬಂದ್ ಮಾಡಿ ಪ್ರತಿಭಟಿಸಿದರು.
ಢವಳಗಿ ಗ್ರಾಮದಲ್ಲಿರುವ 33 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಅಸಮರ್ಪಕ ವಿದ್ಯುತ್ ನೀಡುವ ಪರಿಣಾಮವಾಗಿ ರೈತರು ಢವಳಗಿ ವಿದ್ಯುತ್ ಕೇಂದ್ರದಿಂದ ಹೊರಹೋಗುವ ಎಲ್ಲಾ ವಿದ್ಯುತ್ ಸಂಪರ್ಕವನ್ನು ಕೆಲವು ಗಂಟೆ ಬಂದ್ ಮಾಡಿ ಪ್ರತಿಭಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಸರ್ಮಪಕ ವಿದ್ಯುತ್ ಸಂಪರ್ಕಕ್ಕೆ ವಿರೋಧಿಸಿ ರೈತರು ಮುತ್ತಿಗೆ
ಢವಳಗಿ : ಗ್ರಾಮದ 33 ಕೆವಿ ವಿದ್ಯುತ್ ಕೇಂದ್ರದಲ್ಲಿ ಬಸವನಬಾಗೇವಾಡಿ ತಾಲೂಕಿನ ಜಾಯವಾಡಗಿ ಗ್ರಾಮದ ರೈತರ ಜಮೀನುಗಳಿಗೆ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ಢವಳಗಿ, ರೂಢಗಿ, ಬಳವಾಟ, ತಾರನಾಳ, ಹಳ್ಳೂರ, ಅಗಸಬಾಳ ಗ್ರಾಮದ ರೈತರಿಗೆ ಪದೇಪದೆ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಢವಳಗಿ ವಿದ್ಯುತ್ ಕೇಂದ್ರಕ್ಕೆ ಸಂಬಂಧಿಸಿದ ರೈತರು ವಿರೋಧಿಸಿ ಢವಳಗಿಯ 33 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ವಿಭಾಗೀಯ ಅಧಿಕಾರಿ ಭೀಮಗೌಡ ಯಲಗೋಡ ಆಗಮಿಸುತ್ತಿದ್ದಂತೆ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಹಾಕಿದರು. ನಂತರ ಅಧಿಕಾರಿ ಜತೆ ರೈತರು ಮಾತಿನ ಚಕಮುಕಿ ನಡೆಸಿ, ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ 33 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸಂಬಂಧಪಟ್ಟ ಗ್ರಾಮಗಳನ್ನು ಹೊರತುಪಡಿಸಿ ಜಯವಾಡಗಿ ಗ್ರಾಮದ ರೈತರಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿರುವುದರಿಂದ ನಮ್ಮ ಕೇಂದ್ರ ವ್ಯಾಪ್ತಿಗೆ ಬರುವ ರೈತರಿಗೆ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ ಎಂದು ರೈತರು ಆರೋಪಿಸಿದರು.
ಕೂಡಲೇ ಜಯವಾಡಗಿ ಗ್ರಾಮಕ್ಕೆ ಹೆಚ್ಚುವರಿಯಾಗಿ ನೀಡಿದ್ದ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿ ನಮಗೆ ಸತತವಾಗಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಅಧಿಕಾರಿ ಅವರಿಗೆ ಆಗ್ರಹಿಸಿದರು.
ರೈತರಾದ ಬಸಪ್ಪ ದಿಂಡವಾರ, ಸಂಗಪ್ಪ ಬೀರಗೊಂಡ, ನಿಂಗಪ್ಪ ಬೀರಗೊಂಡ, ಮುತ್ತು ಕೋರಿ, ಜಾಕಿರ್ ಬಾಗವಾನ್, ಅಶೋಕ ಕೋರಿ, ವಿಜುಗೌಡ ಪಾಟೀಲ, ಶಾಂತು ದಿಂಡವಾರ, ಚಂದ್ರು ಮೂಲಿಮನಿ, ಜೆಟ್ಟೆಪ್ಪ ಬೀರಗೊಂಡ, ಶಿವನಗೌಡ ಬಿರಾದಾರ, ರಾಮನಗೌಡ ಬಿರಾದಾರ, ಮುದಕಪ್ಪ ಮಾಳನೂರ, ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net