ಈ ಸಂದರ್ಭದಲ್ಲಿ ಕೆಲವು ಬ್ಯಾಂಕ್‌ನ ವ್ಯವಸ್ಥಾಪಕರು, ಇಲಾಖೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಪ್ರಸಂಗವೂ ಜರುಗಿತು. ಈ ಸಮಸ್ಯೆಗಳು ಬಗೆಹರಿಯದಿದ್ದಲ್ಲಿ ನಮ್ಮ ಹೋರಾಟ ದೊಡ್ಡ ಮಟ್ಟದಲ್ಲಿ ನಡೆಯಲಿದೆ ಎಂದು ಎಚ್ಚರಿಕೆ ನೀಡಲಾಯಿತು.
ನಂತರ ತಹಸೀಲ್ದಾರ್ ಎಸ್.ಎಲ್. ನಯನಾ ಅವರಿಗೆ ಮನವಿಯನ್ನು ನೀಡಲಾಯಿತು. ಎಲ್ಲ ಸಮಸ್ಯೆಗಳಿಗೂ ಕಾಲ ಕ್ರಮೇಣ ಪರಿಹಾರ ಒದಗಿಸುವ ಭರವಸೆಯನ್ನು ತಹಸೀಲ್ದಾರ್ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಎನ್.ಶಿವಕುಮಾರ್, ತಾಲೂಕು ಅಧ್ಯಕ್ಷ ಎಸ್. ಸಿದ್ದಲಿಂಗಸ್ವಾಮಿ ಉಪಾಧ್ಯಕ್ಷ ವೃಷಭೇಂದ್ರ, ಕೆ. ರಂಗಸ್ವಾಮಿ, ಶಿವಕುಮಾರಸ್ವಾಮಿ, ಬಿ.ಜಿ.ಮಹೇಶ್, ಸುಭಾಷ್, ಕುಮಾರ್ ಇತರರು ಇದ್ದರು.