ರೈತರು ಕೆಸಿಸಿ ಬೆಳೆ ಸಾಲ ಸದ್ಬಳಕೆ ಮಾಡಿಕೊಳ್ಳಲಿ

 ಹೂಗ್ಯಂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸದಸ್ಯರಿಗೆ ಎಂಸಿಡಿಸಿಸಿ ನಿರ್ದೇಶಕ ಆರ್.ನರೇಂದ್ರ ಕೆಸಿಸಿ ಬೆಳೆ ಸಾಲದ ಚೆಕ್ ವಿತರಿಸಿದರು. ಎಲ್ಲಪ್ಪನ್, ಮಾರಿಮುತ್ತು, ಮಾಧುರಾಜ್, ವಿನಯ್‌ಕುಮಾರ್ ಇತರರು ಇದ್ದರು.
ಹೂಗ್ಯಂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸದಸ್ಯರಿಗೆ ಎಂಸಿಡಿಸಿಸಿ ನಿರ್ದೇಶಕ ಆರ್.ನರೇಂದ್ರ ಕೆಸಿಸಿ ಬೆಳೆ ಸಾಲದ ಚೆಕ್ ವಿತರಿಸಿದರು. ಎಲ್ಲಪ್ಪನ್, ಮಾರಿಮುತ್ತು, ಮಾಧುರಾಜ್, ವಿನಯ್‌ಕುಮಾರ್ ಇತರರು ಇದ್ದರು.
Published on
ಹನೂರು: ಸಂಘದ ನೂತನ ಸದಸ್ಯರಿಗೆ ನೀಡಲಾಗುತ್ತಿರುವ ಕೆಸಿಸಿ ಬೆಳೆ ಸಾಲವನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಂಡು ಕೃಷಿಯಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಬೇಕು ಎಂದು ಮಾಜಿ ಶಾಸಕ ಹಾಗೂ ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ನರೇಂದ್ರ ತಿಳಿಸಿದರು.

ತಾಲೂಕಿನ ಹೂಗ್ಯಂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬುಧವಾರ ನೂತನ 85 ಸದಸ್ಯರಿಗೆ 75 ಲಕ್ಷ ರೂ. ಕೆಸಿಸಿ ಬೆಳೆ ಸಾಲದ ಚೆಕ್ ವಿತರಿಸಿ ಮಾತನಾಡಿದರು.

ಸಹಕಾರ ಸಂಘಗಳು ರೈತಸ್ನೇಹಿಯಾಗಿದ್ದು, ಕೃಷಿಗೆ ವರದಾನವಾಗಿವೆ. ಗ್ರಾಮದ ಸಹಕಾರ ಸಂಘವು 35 ವರ್ಷದ ಹಿಂದೆಯೇ ಸ್ಥಾಪನೆಯಾಗಿದ್ದು, ಇಲ್ಲಿನ ಆಡಳಿತ ಮಂಡಳಿ ರೈತರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಒದಗಿಸುವುದರ ಜತೆಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದು ಸಂಘದ ಅಭಿವೃದ್ಧಿಗೆ ಸಹಕಾರಿಯಾಗಿದೆ. ರೈತರಿಗೂ ಅನುಕೂಲವಾಗಿದೆ. ಇದೀಗ ನೂತನ ಸದಸ್ಯರಿಗೆ ಸರ್ಕಾರದ ಬೆಂಬಲದೊಂದಿಗೆ ಕೆಸಿಸಿ ಸಾಲವನ್ನು ನೀಡಲಾಗುತ್ತಿದೆ. ಆದ್ದರಿಂದ ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಹಾಗೆಯೇ ಸಕಾಲಕ್ಕೆ ಮರು ಪಾವತಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಲ ಸೌಲಭ್ಯವನ್ನು ಪಡೆಯಲು ಸಹಾಯಕವಾಗುತ್ತದೆ ಎಂದರು.

ಇನ್ನು ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ, ಬೆಳೆ ವೈವಿದ್ಧೀಕರಣ ಹಾಗೂ ನೀರಾವರಿಗೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಹೆಚ್ಚಿನ ಇಳುವರಿ ಪಡೆಯುವುದರ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಜತೆಗೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು ಎಂದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಲ್ಲಪ್ಪನ್, ಉಪಾಧ್ಯಕ್ಷ ಮಾರಿಮುತ್ತು, ನಿರ್ದೇಶಕರಾದ ಗೋವಿಂದ, ಮಾಧುರಾಜ್, ಕಾರ್ಯದರ್ಶಿ ವಿನಯ್‌ಕುಮಾರ್, ಮೇಲ್ವಿಚಾರಕ ಬಾಲಾಜಿ, ಮುಖಂಡರಾದ ರಾಧಕೃಷ್ಣ, ಬಸವರಾಜು, ನಾಗರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net