ಕೈಗಾರಿಕೆ ಉತ್ತೇಜನಕ್ಕೆ ರೈತರು ಕೈ ಜೋಡಿಸಲಿ

ತೆಲಗಿ ಗ್ರಾಮದಲ್ಲಿ 2/20 ಎಂವಿಎ ಮತ್ತು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣಕ್ಕೆ ಚಾಲನೆ ನೀಡಿ ಶಾಸಕ ಶಿವಾನಂದ ಪಾಟೀಲ ಮಾತನಾಡಿದರು. ತಾನಾಜಿ ನಾಗರಾಳ, ಕೆ.ವಿ. ಕುಲಕರ್ಣಿ, ಜಗದೀಶ ಜಾಧವ ಇತರರಿದ್ದರು.
ತೆಲಗಿ ಗ್ರಾಮದಲ್ಲಿ 2/20 ಎಂವಿಎ ಮತ್ತು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣಕ್ಕೆ ಚಾಲನೆ ನೀಡಿ ಶಾಸಕ ಶಿವಾನಂದ ಪಾಟೀಲ ಮಾತನಾಡಿದರು. ತಾನಾಜಿ ನಾಗರಾಳ, ಕೆ.ವಿ. ಕುಲಕರ್ಣಿ, ಜಗದೀಶ ಜಾಧವ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶಿವಾನಂದ ಪಾಟೀಲ ಹೇಳಿಕೆ
  • ವಿದ್ಯುತ್ ವಿತರಣಾ ಕೇಂದ್ರಕ್ಕೆ ಭೂಮಿಪೂಜೆ
ಗೊಳಸಂಗಿ: ಈ ಹಿಂದೆ 2004ರಲ್ಲಿ ಬಸವನಬಾಗೇವಾಡಿ ಕ್ಷೇತ್ರಕ್ಕೆ ನಾನು ಬರುವ ಮುನ್ನ ಇಲ್ಲಿ 7 ಬಾರಿ ಶಾಸಕರಾದವರ ಸ್ವಂತ ಊರಲ್ಲಿ 33 ಕೆವಿ ಸ್ಟೇಷನ್ ಕೂಡ ಇರಲಿಲ್ಲ. ಪ್ರಸ್ತುತ ನಾನು ಬಂದ ಬಳಿಕ ಒಟ್ಟು 7 ಕೆವಿ ಸ್ಟೇಷನ್ ಮಂಜೂರಿ ಮಾಡಿ ರೈತರ ಸಂಕಷ್ಟಕ್ಕೆ ಆಸರೆಯಾಗಿರುವೆ ಎಂದು ಮಾಜಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ತೆಲಗಿ ಗ್ರಾಮದಲ್ಲಿ 2/20 ಎಂವಿಎ ಮತ್ತು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿ, ಒಂದು ಕಾಲದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರವಿದ್ದ ಬಸವನಬಾಗೇವಾಡಿ ಕ್ಷೇತ್ರ ಇಂದು ರಾಜ್ಯದ 7 ಜಿಲ್ಲೆಯ ಜನತೆಗೆ ನೀರು ನೀಡಿದೆ. ಜತೆಗೆ ದೇಶದ 5 ರಾಜ್ಯಗಳಿಗೆ ವಿದ್ಯುತ್ ನೀಡಿದೆ. ಅದಲ್ಲದೇ ಕೆಐಎಡಿಬಿ ಮೂಲಕ ಕೈಗಾರಿಕೆ ಉತ್ತೇಜನಕ್ಕೂ ಕೈ ಜೋಡಿಸಿದೆ. ಇದೆಲ್ಲದಕ್ಕೂ ಈ ಭಾಗದ ರೈತರ ತ್ಯಾಗವೇ ಮೂಲ ಕಾರಣವಾಗಿದೆ ಎಂದರು.
ಸುಪ್ರೀಂ ಕೋರ್ಟ್ ಅಂಗಳದಲ್ಲಿರುವ ಮುಳವಾಡ ಎ ಮತ್ತು ಬಿ ಸ್ಕೀಂ ಯೋಜನೆಯ ನ್ಯಾಯ ಇತ್ಯರ್ಥವಾದರೆ ಈ ಭಾಗದ 6 ಲಕ್ಷ ಎಕರೆ ಭೂಮಿ ನೀರಾವರಿಯಾಗಲಿದೆ. ನಾನು ಸಕ್ಕರೆ ಸಚಿವನಾದ ಬಳಿಕ ಪ್ರತಿ ಟನ್ ಕಬ್ಬಿಗೆ 700 ರೂ., ಇದ್ದ ಬೆಲೆಯನ್ನು 3200 ರೂ., ನೀಡಿರುವೆ.
ವೈಜ್ಞಾನಿಕ ಬೆಳೆ ಬೆಳೆಯಬೇಕಿದ್ದ ರೈತರು ಮೆಕ್ಕೆಜೋಳಕ್ಕೆ ಗಂಟು ಬಿದ್ದು 16 ಲಕ್ಷ ಹೆಕ್ಟೇರ್ ಪ್ರದೇಶ ಮೆಕ್ಕೆಜೋಳ ಬೆಳೆದ ಪರಿಣಾಮ 2400 ರೂ., ಇದ್ದ ಬೆಲೆ 1500 ರೂ.ಗೆ ಕುಸಿಯಿತು. 1300 ಕೋಟಿ ರೂ., ವೆಚ್ಛದ ಜಲಧಾರೆ ಯೋಜನೆ 2027ರ ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರತಿ ಮನೆ ಬಾಗಿಲಿಗೆ ನೀರು ಪೂರೈಕೆಯಾಗಲಿದೆ ಎಂದರು.
ಕಾಂಗ್ರೆಸ್ ಧುರೀಣರಾದ ತಾನಾಜಿ ನಾಗರಾಳ, ಕಲ್ಲು ದೇಸಾಯಿ, ಶಿವಾನಂದ ಅಂಗಡಿ ಮಾತನಾಡಿ, ಜಿಲ್ಲೆಯ ಜನತೆಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಲಭ್ಯವಾದ ಬಳಿಕ ವಿದ್ಯುತ್ ಬೇಡಿಕೆಯೂ ಹೆಚ್ಚಾಗಲಿದ್ದು ಆ ನಿಟ್ಟಿನಲ್ಲಿ ವಿದ್ಯುತ್ ವಿತರಣಾ ಕೇಂದ್ರಗಳನ್ನೂ ಶಾಸಕರ ಸ್ಥಾಪಿಸಲಾಗುತ್ತಿದೆ ಎಂದರು. ಕೆಪಿಟಿಸಿಎಲ್ ಹಿರಿಯ ಅಧಿಕಾರಿಗಳಾದ ರಮೇಶ ಪವಾರ, ಜಗದೀಶ ಜಾಧವ ಮಾತನಾಡಿದರು.
ರುದ್ರಯ್ಯಸ್ವಾಮಿ ಹಿರೇಮಠ, ಎಸ್.ಜಿ. ವಸದ, ಎಸ್.ಎಂ. ಅರಕೇರಿ, ಗುರುನಾಥ ದಡ್ಡಿ, ಸಿದ್ದಪ್ಪ ಬಿಂಜಗೇರಿ, ಬಾಲಾಜಿಸಿಂಗ್, ವಾಹಿದ್ ಜಾಗೀರದಾರ, ಸಿದ್ರಾಮ ಬಿರಾದಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net