ರೈತರು ನೀರಿಗಾಗಿ ಆತಂಕ ಪಡುವ ಅಗತ್ಯವಿಲ್ಲ

ಮುದ್ದೇಬಿಹಾಳ ಪಟ್ಟಣದ ಸಾಯಿನಗರ, ಸಂಗಮೇಶ ನಗರ ಹಾಗೂ ಬಸವ ನಗರದಲ್ಲಿ ಕೆಬಿಜೆಎನ್‌ಎಲ್ ವತಿಯಿಂದ ನಿರ್ಮಿಸಲಾದ ನೂತನ ಉದ್ಯಾನವನಗಳನ್ನು ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಲೋಕಾರ್ಪಣೆಗೊಳಿಸಿದರು. ಶಾಸಕ ಸಿ.ಎಸ್. ನಾಡಗೌಡ, ಕೃಷ್ಣಮೂರ್ತಿ ಕುಲಕರ್ಣಿ, ಡಿ. ಬಸವರಾಜ ಇತರರಿದ್ದರು.
ಮುದ್ದೇಬಿಹಾಳ ಪಟ್ಟಣದ ಸಾಯಿನಗರ, ಸಂಗಮೇಶ ನಗರ ಹಾಗೂ ಬಸವ ನಗರದಲ್ಲಿ ಕೆಬಿಜೆಎನ್‌ಎಲ್ ವತಿಯಿಂದ ನಿರ್ಮಿಸಲಾದ ನೂತನ ಉದ್ಯಾನವನಗಳನ್ನು ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಲೋಕಾರ್ಪಣೆಗೊಳಿಸಿದರು. ಶಾಸಕ ಸಿ.ಎಸ್. ನಾಡಗೌಡ, ಕೃಷ್ಣಮೂರ್ತಿ ಕುಲಕರ್ಣಿ, ಡಿ. ಬಸವರಾಜ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ
  • ನಾಗರಬೆಟ್ಟ ಏತ ನೀರಾವರಿ ಶೀಘ್ರ ಲೋಕಾರ್ಪಣೆ
ಮುದ್ದೇಬಿಹಾಳ: ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರೀ ಜಲಾಶಯದ ಎತ್ತರ ಹೆಚ್ಚಿಸುವ ಕುರಿತು ಈಗಾಗಲೇ ಸುಪ್ರೀಂ ಕೋರ್ಟ್ ತೀರ್ಪಿನ ಆದೇಶದಂತೆ ನಾವು ನಡೆದುಕೊಳ್ಳಬೇಕಾಗುತ್ತದೆ. ಕಾರಣ ಆರ್ಥಿಕ ಇಲಾಖೆ ಸಲಹೆ ಹಾಗೂ ಅನುಮೋದನೆ ಪಡೆದು ಅಲ್ಲಿಯವರೆಗೂ ಈಗಾಗಲೇ ಈ ಭಾಗದ ನೀರಾವರಿ ಯೋಜನೆಗಳ ಸಂಪೂರ್ಣಗೊಳಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಪಟ್ಟಣದ ಸಾಯಿನಗರ, ಸಂಗಮೇಶ ನಗರ ಹಾಗೂ ಬಸವ ನಗರದಲ್ಲಿ ಕೆಬಿಜೆಎನ್‌ಎಲ್ ವತಿಯಿಂದ ನಿರ್ಮಿಸಲಾದ ನೂತನ ಉದ್ಯಾನವನಗಳನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಈ ಬಾರಿ ಎಲ್ಲೆಡೆ ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಆಲಮಟ್ಟಿ ಜಲಾಶಯ ಅಗತ್ಯ ನೀರು ಭರ್ತಿಯಾಗಿಲ್ಲ. ಆದರೂ ಈ ಭಾಗದ ರೈತರಿಗೆ ಮತ್ತು ದನಕರುಗಳಿಗೆ ಕುಡಿಯುವ ನೀರು ಒದಗಿಸಲು ಕೆರೆಗಳಿಗೆ ನೀರು ಹರಿಬಿಡಲು ಚಿಂತನೆ ನಡೆಸಲಾಗಿದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದರು.
ಸದ್ಯ ನಾಗರಬೆಟ್ಟ ಏತ ನೀರಾವರಿ ಯೋಜನೆ ಈಗಾಗಲೇ ಬಹುತೇಕ ಕಾಮಗಾರಿ ಮುಕ್ತಾಯಗೊಂಡಿದೆ. ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಿ ಮುಂಬರುವ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.
ಶಾಸಕ ಸಿ.ಎಸ್. ನಾಡಗೌಡ ಮಾತನಾಡಿ, ಜನರಿಗೆ ಸುಂದರ ಉದ್ಯಾನವನಗಳನ್ನು ನಿರ್ಮಿಸಲು ಕೆಬಿಜೆಎನ್‌ಎಲ್‌ನಿಂದ ಸಾಕಷ್ಟು ಅನುದಾನವನ್ನು ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ದೊರೆತಿದೆ. ಈ ಯೋಜನೆಯನ್ನು ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ವಿಸ್ತರಿಸಬೇಕು. ಪ್ರತಿ ಗ್ರಾಮ ಪಂಚಾಯತಿಗೂ ಕನಿಷ್ಠ ಒಂದು ಉದ್ಯಾನವನ ನಿರ್ಮಾಣವಾಗಬೇಕು ಎಂಬುದು ನನ್ನ ಆಶಯ ಎಂದು ಹೇಳಿದರು.
ಕೆಬಿಜೆಎನ್‌ಎಲ್ ನಿರ್ದೇಶಕ ಕೃಷ್ಣಮೂರ್ತಿ ಕುಲಕರ್ಣಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ. ಬಸವರಾಜ, ಆಲಮಟ್ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಕೆ. ಬಗಾಯತ್, ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಬಿ.ಎ. ಸೌದಾಗರ, ಕೀರ್ತಿ ಚಾಲಕ, ರಮೇಶ ಚವಾಣ್, ಮಲ್ಲನಗೌಡ ಬಿರಾದಾರ, ಶಿವಶಂಕರಗೌಡ ಹಿರೇಗೌಡರ, ಬಿ.ಎಸ್. ಪಾಟೀಲ, ಶರಣು ಸಜ್ಜನ, ಸಂಗನಗೌಡ ಅಸ್ಕೀ, ಪ್ರಭುಗೌಡ ಮದರಕಲ್ಲ, ಶರಣುಧನಿ ನಾಡಗೌಡ, ಪ್ರಭುರಾಜ ಕಲಬುರ್ಗಿ, ಸಂಗನಗೌಡ ಬಿರಾದಾರ, ಸಂಗನಗೌಡ ಪಾಟೀಲ, ರಾಜುಗೌಡ ಕರಡ್ಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net