22ಕ್ಕೆ ರೈತ ಸಂಟನೆಗಳಿಂದ ಎಸಿ ಕಚೇರಿ ಜಾಥಾ

Farmers' groups march to AC office on 22nd
Farmers' groups march to AC office on 22nd
Published on
ತಿಪಟೂರು: ಖಾತೆದಾರರು ಮತ್ತು ಬಗರ್​ಹುಕುಂ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯ ಖಂಡಿಸಿ ಜೂ.22ರಂದು ರೈತಪರ ಸಂಘಟನೆಗಳ ವತಿಯಿಂದ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಹಸಿರಸೇನೆ ತಾಲೂಕು ಅಧ್ಯಕ್ಷ ತಿಮ್ಲಾಪುರ ದೇವರಾಜ್​, ಬಗರ್​ಹುಕುಂ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆ ಇನ್ನಿಲ್ಲದ ದೌರ್ಜನ್ಯ ಎಸಗುತ್ತಿದೆ. ರೈತರನ್ನು ಒಕ್ಕಲೆಬ್ಬಿಸುವ ಕಾರ್ಯದಲ್ಲಿ ತೊಡಗಿದ್ದರೂ ಸ್ಥಳಿಯ ಶಾಸಕರು ಈವರೆಗೂ ರೈತರ ಪರವಾಗಿ ಧ್ವನಿ ಎತ್ತಿಲ್ಲ. ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನವೂ ಆಗಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜೂ.22ರಂದು ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಈರಲಗೆರೆ ಗ್ರಾಮದಿಂದ ಸಹಸ್ರಾರು ರೈತರು ನಗರದ ಉಪವಿಭಾಗಾಧಿಕಾರಿ ಕಚೇರಿವರೆಗೂ ಕಾಲ್ನಡಿಗೆಯಲ್ಲಿ ತೆರಳಿ ಸಮಸ್ಯೆ ಬಗೆಹರಿಸಲು ಮನವಿ ನೀಡಲಾಗುವುದು ಎಂದು ತಿಳಿಸಿದರು.
ಪ್ರಾಂತರೈತ ಸಂಘದ ಜಿಲ್ಲಾಧ್ಯಕ್ಷ ಆರ್​.ಎಸ್​.ಚನ್ನಬಸವಣ್ಣ ಮಾತನಾಡಿ, 30&-40 ವರ್ಷಗಳಿಂದ ರೈತರು ಬಗರ್​ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಶಾಸಕರು 7ರಿಂದ 8 ಸಾವಿರ ರೈತರಿಗೆ ಸಾಗುವಳಿ ಪತ್ರ ನೀಡಿದ್ದೇನೆ ಎನ್ನುತ್ತಾರೆ. ಆದರೆ, ಇಲ್ಲಿವರೆಗೂ ಹದ್ದುಬಸ್ತು ಮಾಡಿಕೊಟ್ಟಿಲ್ಲ. ರೈತರು ಬ್ಯಾಂಕ್​ಗಳಿಂದ ಸಾಲ ಸೌಲಭ್ಯ ಪಡೆದು ತೆಂಗು, ಅಡಿಕೆ ಬೆಳೆಸಿ ದಶಕಗಳಿಂದ ಬದುಕು ಕಟ್ಟಿಕೊಂಡಿದ್ದಾರೆ. ಈಗ ಏಕಾಏಕಿ ಅರಣ್ಯ ಇಲಾಖೆ ಈ ಭೂಮಿ ನಮ್ಮದೆಂದು ಹೇಳಿಕೊಂಡು, ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ರೈತರ ಮೇಲಿನ ದಬ್ಬಾಳಿಕೆ ಹೀಗೆ ಮುಂದುವರಿದರೆ ನಮ್ಮ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ ಎಂದರು.
ಸಭೆಯಲ್ಲಿ ರೈತ ಮುಖಂಡರಾದ ಅಲ್ಲಾಬಕಾಶ್​ ತಿಮ್ಮೇಗೌಡ, ಸಿದ್ದಯ್ಯ ಬಳುವನೇರಲು, ಎಂ. ನಾಗೇಶ್​, ಕೆಳಹಟ್ಟಿ ಶ್ರೀಕಾಂತ್​, ಬಿಳಿಗೆರೆ ನಾಗೇಶ್​, ರಾಜಮ್ಮ, ಶಂಕರಲಿಂಗಯ್ಯ ಇತರರು ಇದ್ದರು.
18 ಟಿಪಿಆರ್​ 01
ತಿಪಟೂರಿನಲ್ಲಿ ರಾಜ್ಯ ರೈತ ಸಂ ಮತ್ತು ಹಸಿರುಸೇನೆಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ತಿಮ್ಲಾಪುರ ದೇವರಾಜ್​, ಆರ್​.ಎಸ್​.ಚನ್ನಬಸವಣ್ಣ, ಸಿದ್ದಬಸಪ್ಪ, ಸದಾಶಿವಯ್ಯ, ರಂಗಧಾಮಯ್ಯ ಹಳೇಪಾಳ್ಯ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net