ರೈತರೇ, ಮಧ್ಯವರ್ತಿಗಳ ವಾತಿಗೆ ಮರುಳಾಗದಿರಿ

Farmers, don't be fooled by the middlemen.
Farmers, don't be fooled by the middlemen.
Published on
ತುರುವೇಕೆರೆ : ತಾಲೂಕಿನಲ್ಲಿ ಕೆಲವರು ತಾವು ಬೋರ್ ವೆಲ್ ಕೊರೆಸಿಕೊಡುವುದಾಗಿ ರೈತರನ್ನು ವಂಚಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದ್ದು, ಸಾರ್ವಜನಿಕರು ಮತ್ತು ರೈತಾಪಿಗಳು ಎಚ್ಚರವಹಿಸುವಂತೆ ಬೋರ್ ವೆಲ್ ಏಜೆನ್ಸಿ ಹಾಗೂ ಲಾರಿ ವಾಲೀಕರ ಸಂದ ತಾಲೂಕು ಅಧ್ಯಕ್ಷ ಚೌಡೇನಹಳ್ಳಿ ಪಂಚಾಕ್ಷರಿ ಮನವಿ ವಾಡಿದರು. 
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ವಾತನಾಡಿದ ಅವರು, ಕೆಲವರು ಬೋರ್ ಪಾಯಿಂಟ್ ವಾಡುವವರು ಹಾಗೂ ಇನ್ನಿತರರು ತಾವೇ ಬೋರ್ ವೆಲ್ ಕೊರೆಸುವುದಾಗಿ ಒಂದಿಷ್ಟು ಮುಂಗಡ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಕಡಿಮೆ ದರಕ್ಕೆ ಬೋರ್ ವೆಲ್ ಕೊರೆಸುವುದಾಗಿ ನಂಬಿಸಿ ಹೆಚ್ಚು ಆಳ ಕೊರೆಯುತ್ತಿದ್ದಂತೆ ಹೆಚ್ಚು ಹೆಚ್ಚು ದರ ನಿಗದಿಪಡಿಸುತ್ತಿದ್ದಾರೆ. ಇತ್ತ ರೈತರು ಮಧ್ಯವರ್ತಿಗಳ ವಾತಿಗೆ ಮರುಳಾಗಿ ಹೆಚ್ಚು ಬೆಲೆ ತೆರುವ ಅನಿವಾರ್ಯತೆ ಉಂಟಾಗುತ್ತಿದೆ ಎಂದು ಆರೋಪಿಸಿದರು. 
 ತಾಲೂಕಿನಲ್ಲಿ ಅಧಿಕೃತವಾಗಿ ಕಚೇರಿಗಳನ್ನು ತೆರೆದು ಸಾರ್ವಜನಿಕರಿಗೆ ಸೇವೆ ನೀಡುತ್ತಿರುವ ಏಜನ್ಸಿ ಅಥವಾ ಬೋರ್‌ವೆಲ್ ವಾಹನದ ವಾಲೀಕರನ್ನು ಸಂಪರ್ಕಿಸಿ ಬೋರ್ ವೆಲ್ ಕೊರೆಸಿದರೆ ಸಾವಿರ ಅಡಿಗಳಿಗೆ ಕನಿಷ್ಠ 15 ಸಾವಿರ ರೂ. ಉಳಿತಾಯ ಆಗುತ್ತದೆ ಎಂದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net